ಓಡಿಲ್ನಾಳ ಗ್ರಾಮದ ಮೈರಳಿಕೆ ಎಂಬಲ್ಲಿ ಬೃಹತ್ ಉಚಿತ ಆಧಾರ್ ನೊಂದಣಿ ಹಾಗೂ ತಿದ್ದುಪಡಿ ಜೊತೆಗೆ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಹಾಗೂ ಆಭಾ ಕಾರ್ಡ್ ನೊಂದಣಿ ಯ ಅಭಿಯಾನ ಕಾರ್ಯಕ್ರಮ

0

ಓಡಿಲ್ನಾಳ:  ಓಂ ಫ್ರೆಂಡ್ಸ್ (ರಿ.) ಕಟ್ಟದಬೈಲು , ಓಡಿಲ್ನಾಳ ಗ್ರಾಮರವರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು‌ ವಿಭಾಗ‌ರವರ ಸಹಯೋಗದೊಂದಿಗೆ ನ.6  ರಂದು ಓಡಿಲ್ನಾಳ ಗ್ರಾಮದ ಮೈರಳಿಕೆ ಎಂಬಲ್ಲಿ ಬೃಹತ್ ಉಚಿತ ಆಧಾರ್ ನೊಂದಣಿ ಹಾಗೂ ತಿದ್ದುಪಡಿ ಜೊತೆಗೆ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಹಾಗೂ ಆಭಾ ಕಾರ್ಡ್ ನೊಂದಣಿ ಯ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು.

ಮೈರಳಿಕೆ ಓಡಿಲ್ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ವಾಮನ ಮೂಲ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಘದ ಗೌರವಾದ್ಯಕ್ಷ ಜನಾರ್ಧನ ಕುಲಾಲ್ ರವರು ವಹಿಸಿದ್ದು, ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸಂದೀಪ್ ಕುಲಾಲ್, ಅಂಚೆ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮ ಒನ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗುರು ಪ್ರಸಾದ್ ರವರು ಸ್ವಾಗತಿಸಿ, ಆಕಾಶ್ ರವರು ಧನ್ಯವಾದ ನೀಡಿ, ಸಂಘದ ಕಾರ್ಯದರ್ಶಿ ಮನೋಹರ್ ರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here