ಮಡಂತ್ಯಾರು: ರಾ.ಸೇ.ಯೋ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

0

ಮಡಂತ್ಯಾರು: ರಾ.ಸೇ.ಯೋ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನ.8 ರಂದು ಸೇಕ್ರೆಡ್ ಹಾರ್ಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ  ಸಂಚಾಲಕರಾದ ಫಾ. ಬೇಜಿಲ್ ವಾಜ್ ದೀಪ ಬೆಳಗಿಸಿ ಎಲ್ಲ ಸ್ವಯಂ ಸೇವಕ-ಸೇವಕಿಯರಿಗೆ ಶುಭಕೋರಿ ತಮ್ಮ ಜೀವನದಲ್ಲಿ ಒಂದು ಗುರಿ ಇರಬೇಕು ಆ ಗುರಿಯನ್ನು ಸಾಧಿಸುವಲ್ಲಿ ಸತತ ಪ್ರಯತ್ನವಿರಬೇಕು. ಪರರಿಗೆ ಸಹಾಯ ಹಸ್ತವನ್ನು ಚಾಚುತ್ತ ಒಳಿತನ್ನು ಬಯಸಿ ಜೀವಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜೋಸೆಫ್. ಎನ್ ಎಮ್ ಮಾತನಾಡಿ “ಎನ್.ಎಸ್.ಎಸ್ ಎಂದರೆ ಶಿಸ್ತು. ಶಿಸ್ತು ಎಂದರೆ ಎನ್.ಎಸ್.ಎಸ್” ಎಂದು ನುಡಿದರು.

ಮುಖ್ಯ ಅತಿಥಿಗಳಾದ ಪ್ರೊ.ಈಶ್ವರ ಗೌಡ ಪ್ರಾಧ್ಯಾಪಕರು ನಾವು ಜೀವನದಲ್ಲಿ ನಮ್ಮತನವನ್ನು ಅರಿತು ಎನ್ ಎಸ್ ಎಸ್ ನಲ್ಲಿ ಸಿಗುವ ಎಲ್ಲಾ ಪ್ರಯೋಜನಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ರಾಷ್ಟ್ರೀಯ ಯೋಜನಾ ಘಟಕದ ಯೋಜನಾಧಿಕಾರಿಗಳಾದ ಶ್ರೀ ಪ್ರಶಾಂತ್, ಶ್ರೀ ಅರುಣ್ ಜಾನ್ಸನ್ ಬ್ರಾಂಕೊ, ಕುಮಾರಿ ಜೀವ.ವಿ.ಸಿ , ಕುಮಾರಿ ರಕ್ಷಿತ ಶೆಟ್ಟಿ ಹಾಗೂ ಎನ್ ಎಸ್ ಎಸ್ ಘಟಕದ ನಾಯಕ- ನಾಯಕಿಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸ್ವಯಂ ಸೇವಕಿಯರಾದ ಕುಮಾರಿ ಧನಲಕ್ಷ್ಮಿ ಹಾಗೂ ಕುಮಾರಿ ಸೌಂದರ್ಯ ನಿರೂಪಿಸಿದರು. ಶ್ರೀ ಅರುಣ್ ಜಾನ್ಸನ್ ಬ್ರಾಂಕೊ ಸ್ವಾಗತಿಸಿ ಕುಮಾರಿ ಶಕೀರಾ ವಂದಿಸಿದರು

LEAVE A REPLY

Please enter your comment!
Please enter your name here