ಪುತ್ತೂರು: ಬಿಜೆಪಿ ವತಿಯಿಂದ ಮುಂಡೂರಿನಲ್ಲಿ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರತಿ ಬೂತ್ ನಲ್ಲಿ ಸುಮಾರು 100 ಗಿಡಗಳನ್ನು ನೆಟ್ಟು ಪರಿಸರವನ್ನು ರಕ್ಷಣೆ ಮಾಡುವುದಕ್ಕೆ ಸಂಕಲ್ಪ ಮಾಡಬೇಕಾಗಿದೆ. ಪರಿಸರ ನಾಶದಿಂದ ಪ್ರಸ್ತುತ ಸಮಸ್ಯೆಗಳು ತಲೆದೂಗಿದ್ದು, ಕಾರ್ಯಕರ್ತರೆಲ್ಲರೂ ಕೈ ಜೋಡಸಬೇಕೆಂದು ಬಿಜೆಪಿ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ ಕರೆ ನೀಡಿದರು.
ಅಂತರ್ಜಾಲ ಪರಿಶೋಧಕ ರಾಜೀವ ಸುವರ್ಣ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀಕಾಂತ್ ಅಚಾರ್, ಬೂತ್ ಸಮಿತಿಯ ಅಧ್ಯಕ್ಷ ಶ್ರೀಧರ್ ನಾಯ್ಕ,ಪಕ್ಷದ ಪ್ರಮುಖರಾದ ವಸಂತ್ ರೈ, ಶರತ್ ಚಂದ್ರ ಬೈಪಡಿತ್ತಾಯ, ಪುರಂದರ ಗೌಡ, ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಶೀನಪ್ಪ ನಾಯ್ಕ, ಪೇಜ್ ಪ್ರಮುಖರಾದ ಹರೀಶ್ ನಾಯ್ಕ , ದಿನೇಶ್ ಕಲ್ಲಿಮ, ಪುರುಷೋತ್ತಮ, ಸುಂದರ ಬಿ.ಕೆ, ರವಿಚಂದ್ರ ಗೌಡ ಕಾರ್ಯಕರ್ತರಾದ ಹರೀಶ್ , ಶಿವಪ್ರಸಾದ್, ಇಸ್ಮಾಯಿಲ್, ಮಹಮ್ಮದ್ ಉಪಸ್ಥಿತರಿದ್ದರು. ಬಿ ಕೆ ಸುಂದರ ಸ್ವಾಗತಿಸಿ ವಂದಿಸಿದರು.