ಸುದ್ದಿ ನ್ಯೂಸ್ ಬೆಳ್ತಂಗಡಿ ಯೂಟ್ಯೂಬ್ ಚಾನಲ್ 50 ಸಾವಿರ ಚಂದಾದಾರರು-ಕೇಕ್ ಕತ್ತರಿಸಿ ಸಂಭ್ರಮಾಚರಣೆ

0

ಬೆಳ್ತಂಗಡಿ:  ಸುದ್ದಿ ಬಿಡುಗಡೆ ಬೆಳ್ತಂಗಡಿ ವಾರ ಪತ್ರಿಕೆಯ ಅಂಗ ಸಂಸ್ಥೆಯಾಗಿರುವ ಸುದ್ದಿ ನ್ಯೂಸ್ ಬೆಳ್ತಂಗಡಿ ಯೂಟ್ಯೂಬ್ ಚಾನಲ್ ಇದೀಗ 50 ಸಾವಿರಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದು , ವೀಕ್ಷಕರಿಗೆ ನೈಜ ಹಾಗೂ ಶೀಘ್ರ ಮಾಹಿತಿಯನ್ನು ನೀಡುತ್ತಿದೆ. 50 ಸಾವಿರ‌ ಚಂದಾದಾರರನ್ನು ಹೊಂದಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆಯನ್ನು  ಸುದ್ದಿ ಬೆಳ್ತಂಗಡಿ ಕಚೇರಿಯಲ್ಲಿ ನಡೆಯಿತು.

ಕೇಕ್ ಕತ್ತರಿಸಿ ಸಂಭ್ರಮಮಾಚರಣೆ
ಶುಭ ಹಾರೈಸಿದ ಸಂಪಾದಕ ಡಾ.ಯು.ಪಿ.ಶಿವಾನಂದ್

ಸುದ್ದಿ ಸಮೂಹ ಸಂಸ್ಥೆಗಳ ಸಂಪಾದಕರಾದ ಡಾ. ಯು.ಪಿ ಶಿವಾನಂದರವರು ಕೇಕ್ ಕತ್ತರಿಸಿ ಇದು ಎಲ್ಲರ ಸಂಭ್ರಮ, ಸುದ್ದಿ ಚಾನೆಲ್ ನ ವೀಕ್ಷಕರು ನಮ್ಮ ಎಲ್ಲಾ ನ್ಯೂಸ್ ಗಳನ್ನು ಮೆಚ್ಚಿದ್ದಾರೆ, ನಮ್ಮ ಚಾನಲ್ ತಾಲೂಕಿನಲ್ಲಿ ಇಷ್ಟು ಬೆಳೆಯಬೇಕಾದರೆ ಇದಕ್ಕೆ ಸಿಬ್ಬಂದಿಗಳ ಪಾತ್ರವೂ ಹೆಚ್ಚಿದೆ. 50000 ಚಂದಾದಾರರಿಗೆ ಸುದ್ದಿಯ ಓದುಗರು ಮತ್ತು ವೀಕ್ಷಕರಿಗೆ ವಿಶೇಷ ಧನ್ಯವಾದಗಳು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ದಿ ಬೆಳ್ತಂಗಡಿ ಸಿ.ಇ.ಓ ಸಿಂಚನಾ ಊರುಬೈಲ್, ವ್ಯವಸ್ಥಾಪಕರಾದ ಮಂಜುನಾಥ್ ರೈ, ಮುಖ್ಯ ವರದಿಗಾರರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿ.ಎಸ್ ಕುಲಾಲ್ , ಸುದ್ದಿ ಚಾನಲ್‌ನ ಮುಖ್ಯಸ್ಥರಾದ ದಾಮೋದರ್ ದೊಂಡೋಲೆ, ತಾಂತ್ರಿಕ ಮುಖ್ಯಸ್ಥರಾದ ಪ್ರವೀಣ್, ಹಾಗೂ ಎಲ್ಲಾ‌ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here