ನೆಲ್ಯಾಡಿ: ಅನಾರೋಗ್ಯದಿಂದ ಜೂ.10ರಂದು ನಿಧನರಾದ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ರವರಿಗೆ ನುಡಿನಮನ ಕಾರ್ಯಕ್ರಮ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಲಯದಲ್ಲಿ ನಡೆಯಿತು.
ವಿದ್ಯಾಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್ರವರು ಮಾತನಾಡಿ, ಗಿರೀಶ್ ಕಾರ್ನಾಡ್ರವರು ಸಾಹಿತ್ಯ ಲೋಕ, ಚಿತ್ರರಂಗ, ನಾಟಕ, ರಂಗಭೂಮಿ,ಶಿಕ್ಷಣ ಮುಂತಾದ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಂಡರು. ಮೌನ ಪ್ರಾರ್ಥನೆ ಮೂಲಕ ಗಿರೀಶ್ ಕಾರ್ನಾಡ್ರವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ವಿದ್ಯಾಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.