HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕುಕ್ಕಟ್ಟೆಯಲ್ಲಿ ಆಧಾರ ಶಿಲಾ ಪ್ರತಿಷ್ಠೆ, ನಿಧಿಕುಂಭ ಸ್ಥಾಪನೆ, ಪಾದುಕಾನ್ಯಾಸ- ಧಾರ್ಮಿಕ ಸಭೆ

Puttur_Advt_NewsUnder_1
Puttur_Advt_NewsUnder_1

  • ಸಮರ್ಪಣ ಭಾವದಿಂದ ತೊಡಗಿಸಿಕೊಂಡಾಗ ದೇವಸ್ಥಾನ ಶೀಘ್ರದಲ್ಲಿ ನಿರ್ಮಾಣ ಸಾಧ್ಯ- ಎಸ್ ಅಂಗಾರ
  • ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಯೋಗ ಸಿಗುವುದೇ ದೊಡ್ಡ ಸೌಭಾಗ್ಯ- ಧನಂಜಯ ಆಚಾರ್ಯ ಪಾಲ್ಕೆ
  • ಸಮುದಾಯದ ಕೂಡುವಿಕೆಯೊಂದಿಗೆ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವುದು ಉತ್ತಮ ಕಾರ್ಯ- ಲೋಕೇಶ್ ಆಚಾರ್ಯ
  • ದೇವಸ್ಥಾನವು ಕ್ಲಪ್ತ ಸಮಯದಲ್ಲಿ ನಿರ್ಮಾಣಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ- ಎಸ್.ಎನ್.ಮನ್ಮಥ
  • ಎಲ್ಲರ ಸಹಕಾರದೊಂದಿಗೆ ಭವ್ಯವಾದ ದೇವಸ್ಥಾನ ನಿರ್ಮಾಣಗೊಳ್ಳಲಿ – ಪ್ರಮೀಳಾ ಜನಾರ್ದನ
  • ದೇವಸ್ಥಾನದ ಜೀರ್ಣೋದ್ಧಾರದ ಮೂಲಕ ಎಲ್ಲಾ ಕಡೆ ಧಾರ್ಮಿಕ ಜಾಗೃತಿ ಉಂಟಾಗಿದೆ- ಅರುಣ್ ಕುಮಾರ್ ಪುತ್ತಿಲ

ಕಾಣಿಯೂರು: ಊರಿನ ದೇವಸ್ಥಾನಗಳು ಜೀರ್ಣೋದ್ಧಾರಗೊಂಡು ಸುಂದರ ದೇವಸ್ಥಾನವಾಗಿ ನಿರ್ಮಾಣಗೊಂಡರೆ ನಮ್ಮ ಜೀವನವು ಸುಂದರಗೊಂಡ ಹಾಗೆ. ಭಕ್ತರು ಸಮರ್ಪಣ ಭಾವದಿಂದ ತೊಡಗಿಸಿಕೊಂಡಾಗ ಮಾತ್ರ ದೇವಸ್ಥಾನ ಅತೀ ಶೀಘ್ರದಲ್ಲಿ ನಿರ್ಮಾಣಗೊಳ್ಳಲು ಸಾಧ್ಯ ಎಂದರು ಸುಳ್ಯ ಶಾಸಕ ಎಸ್. ಅಂಗಾರ ಹೇಳೀದರು. ಅವರು ಜೂ 9ರಂದು ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೇಶವ ತಂತ್ರಿಗಳು ಮೂಡಬಿದ್ರೆ ಇವರ ನೇತೃತ್ವದಲ್ಲಿ ವಾಸ್ತುಶಿಲ್ಪಿ ಕೃಷ್ಣ ಆಚಾರ್ಯ ಕುಕ್ಕುಂದೂರು ಕಾರ್ಕಳ ಇವರ ನಿರ್ದೇಶನದಲ್ಲಿ ಆಧಾರ ಶಿಲಾ ಪ್ರತಿಷ್ಠೆ, ನಿಧಿಕುಂಭ ಸ್ಥಾಪನೆ ಹಾಗೂ ಪಾದುಕಾನ್ಯಾಸದ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ದೇವಸ್ಥಾನ ಮೂಲ ಸೌಕರ್ಯ ಅಭಿವೃದ್ಧಿಗೆ ಶಾಸಕರ 2019-20ನೇ ಸಾಲಿನ ಪ್ರದೇಶ ಅಭಿವೃದ್ಧಿ ಯೋಜನೆಯಿಂದ ರೂ ಐದು ಲಕ್ಷ ಹಾಗೂ ಧಾರ್ಮಿಕ ಧತ್ತಿ ಇಲಾಖೆ ಮೂಲಕ ಹೆಚ್ಚಿನ ಅನುದಾನವನ್ನು ಭರಿಸುವ ಕೆಲಸ ಮಾಡುವ ಭರವಸೆಯನ್ನು ಶಾಸಕರು ನೀಡಿದರು. ಕಾರ್ಯಕ್ರಮದ ಅಧ್ಯಕ್ಷೆಯನ್ನು ವಹಿಸಿ ಮಾತನಾಡಿದ ಮಂಗಳೂರು ಹಂಪನಕಟ್ಟೆ ಕೆನರಾ ಜ್ಯುವೆಲ್ಲರ್‍ಸ್‌ನ ಧನಂಜಯ ಆಚಾರ್ಯ ಪಾಲ್ಕೆಯವರು, ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಯೋಗ ಸಿಗುವುದೇ ದೊಡ್ಡ ಸೌಭಾಗ್ಯ. ಅಂತಹ ಯೋಗ ನಮಗೆ ಸಿಕ್ಕಿದೆ ಅಂದರೆ ನಾವೆಲ್ಲಾ ಭಾಗ್ಯವಂತರು. ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತೇನೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಕಾಳಿಕಾಂಬ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಲೋಕೇಶ್ ಆಚಾರ್ಯ ಪುಂಜಾಲಕಟ್ಟೆ ಮಾತನಾಡಿ, ಎಲ್ಲಾ ಸಮುದಾಯದ ಕೂಡುವಿಕೆಯೊಂದಿಗೆ ಈ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವುದು ಒಂದು ಉತ್ತಮ ಕಾರ್ಯವಾಗಿದೆ. ದೇವಸ್ಥಾನವು ಅತೀ ಶೀಘ್ರದಲ್ಲಿ ನಿರ್ಮಾಣವಾಗಲಿ ಎಂದರು. ಬೆಳ್ಳಾರೆ ಕ್ಷೇತ್ರದ ಜಿ.ಪಂ ಸದಸ್ಯ ಎಸ್.ಎನ್.ಮನ್ಮಥ ಮಾತನಾಡಿ, ದೇವಸ್ಥಾನವು ಕ್ಲಪ್ತ ಸಮಯದಲ್ಲಿ ನಿರ್ಮಾಣಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ದೇವಸ್ಥಾನದ ಕೆಲಸ ಕೈಂಕರ್ಯಗಳನ್ನು ಗಮನಿಸಿದಾಗ ಇದು ಕಾಣುತ್ತಾ ಇದೆ. ಈ ದೇವಸ್ಥಾನವು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವುದರಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಕೈಜೋಡಿಸುತ್ತೇನೆ ಎಂದವರು ರೂ 2.50 ಲಕ್ಷ ಅನುದಾನವನ್ನು ಮೂಲ ಸೌಕರ್ಯ ಅಭಿವೃದ್ಧಿಗೆ ಇಡುತ್ತೇನೆ ಎಂದರು.

ಬೆಳಂದೂರು ಕ್ಷೇತ್ರದ ಜಿ.ಪಂ ಸದಸ್ಯೆ ಪ್ರಮೀಳಾ ಜನಾರ್ದನ ಮಾತನಾಡಿ, ಹುಟ್ಟು ಸಾವುಗಳ ಮಧ್ಯೆ ಇರುವ ನಮ್ಮ ಸುಂದರ ಕ್ಷಣಗಳು ಅಂದರೆ ದೇವಸ್ಥಾನದ ಜೀರ್ಣೋದ್ಧಾರದಂತಹ ಪುಣ್ಯದ ಕೆಲಸ ಕಾರ್ಯವನ್ನು ಮಾಡುವುದು. ದೊಡ್ಡ ದೊಡ್ಡ ದೇವಸ್ಥಾನಗಳಿಗೆ ನಮ್ಮ ಅತಿಯಾದ ಸಮರ್ಪಣೆಗೆ ಯಾವುದೇ ಫಲವನ್ನು ನೀಡುವುದಿಲ್ಲ. ಇಂತಹ ಮೂಲಧನವಿಲ್ಲದ ದೇವಸ್ಥಾನಗಳ ಜೀರ್ಣೋದ್ಧಾರದ ಸಂದರ್ಭದಲ್ಲಿ ನಮ್ಮ ಕಾಣಿಕೆ ಹಾಗೂ ದೇಣಿಗೆಗಳು ದೇವಸ್ಥಾನ ನಿರ್ಮಾಣಗೊಳ್ಳಲು ಸಹಕಾರಿಯಾಗುವುದರೊಂದಿಗೆ ನಮಗೆ ಅದರಲ್ಲಿ ಹೆಚ್ಚಿನ ಫಲ ಸಿಗುತ್ತದೆ. ಎಷ್ಟು ಸಾಧ್ಯ ಉಂಟು ಅಷ್ಟು ಅನುದಾನವನ್ನು ನೀಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇನೆ. ಭವ್ಯವಾದ ದೇವಸ್ಥಾನ ನಿರ್ಮಾಣಕ್ಕೆ ಎಲ್ಲರ ಸಹಕಾರವಿರಲಿ ಎಂದರು.

ಧಾರ್ಮಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮ ನಡೆಯುವ ಮೂಲಕ ಎಲ್ಲಾ ಕಡೆ ಧಾರ್ಮಿಕ ಜಾಗೃತಿ ಉಂಟಾಗಿದೆ. ಇಟ್ಟುಕೊಂಡ ಸಮಯಕ್ಕಿಂತ ಮೊದಲೇ ದೇವಸ್ಥಾನ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಭಾಗದಿಂದ ರೂ ಒಂದು ಲಕ್ಷದಷ್ಟು ದೇಣಿಗೆ ಮುಂದಿನ ದಿನಗಳಲ್ಲಿ ನೀಡುವುದಾಗಿ ಹೇಳಿದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಆಚಾರ್ಯ ಮರೋಳಿ ಮಾತನಾಡಿ, ಒಂದು ವೈಷಿಷ್ಟತೆಯಿಂದ ಕೂಡಿದ ಶಿಲಮಯವಾದ ದೇವಸ್ಥಾನದ ಗರ್ಭಗುಡಿ ನಿರ್ಮಾಣದ ಕೆಲಸಕ್ಕೆ ಕೈ ಹಾಕಿದ್ದೇವೆ. ಜೊತೆಗೆ ಸುತ್ತು ಪೌಳಿ ನಿರ್ಮಾಣವು ಆಗಬೇಕಾಗಿದೆ. ಊರ ಪರವೂರ ಸಮಾಜದ ದಾನಿಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಇಳಂತಿಲ ಮಾತನಾಡಿ, ಅಂದಾಜು ಸುಮಾರು 2.5ಕೋಟಿ ವೆಚ್ಚದಲ್ಲಿ ಭವ್ಯವಾದ ದೇವಸ್ಥಾನದ ನಿರ್ಮಾಣದ ಕೆಲಸಗಳು ನಡೆಯಲಿದ್ದು, ಕ್ಲಪ್ತ ಸಮಯದಲ್ಲಿ ಗುರಿಮುಟ್ಟಲು ಜನಪ್ರತಿನಿಧಿಗಳ ಹಾಗೂ ಊರ ಪರವೂರಿನ ಎಲ್ಲಾ ಜನತೆಯ ಸಹಕಾರ ನೀಡಬೇಕೆಂದರು.

ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಧನಂಜಯ ಆಚಾರ್ಯ ಏನೆಕಲ್ಲು ಮಾತನಾಡಿ, ದೇವಸ್ಥಾನ ನಿರ್ಮಾಣದ ಸಯೋಗ ಬಂದಿರುವುದು ನಮ್ಮ ಪೂರ್ವಜನ್ಮದ ಪುಣ್ಯದ ಫಲ ಎಂದು ತಿಳಿದುಕೊಂಡು ದೊಡ್ಡ ಕೆಲಸದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಆಧಾರ ಶಿಲಾ ಪ್ರತಿಷ್ಠೆ, ನಿಧಿಕುಂಭ ಸ್ಥಾಪನೆ, ಪಾದುನಾನ್ಯಾಸ ಕಾರ್ಯಕ್ರಮದವರೆಗೆ ಬಂದು ಮುಟ್ಟಿದ್ದೇವೆ. ಮುಂದಿನ ಕೆಲಸಕ್ಕೆ ಶಕ್ತಿ ತುಂಬಲು ಎಲ್ಲರು ಸಹಕಾರ ನೀಡಬೇಕೆಂದರು.

ಈ.ಎಸ್.ಪುರಂದರ ಪುರೋಹಿತ್ ಮುನಿಯಾಲ್ ಧಾರ್ಮಿಕ ಉಪನ್ಯಾಸ ನೀಡಿದರು. ಸುಳ್ಯ ತಾ.ಪಂ, ಉಪಾಧ್ಯಕ್ಷೆ ಶುಭದಾ ಎಸ್.ರೈ, ಕಟಪಾಡಿ ಶ್ರೀ ಕಾಳೀಕಾಂಭ ದೇವಸ್ಥಾನದ ದಿನೇಶ್ ಆಚಾರ್ಯ ಎರ್ಮಾಳ, ಸುಳ್ಯ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವಿಸ್ತಾರಣಾಧಿಕಾರಿ ಮುರಳೀಧರ ಎರ್ಮಾಯಿಲ್, ವಿಶ್ರಾಂತ ತಹಶೀಲ್ದಾರರಾದ ಎಸ್..ರಾಘವೇಂದ್ರ , ಎಣ್ಮೂರು ಗ್ರಾ.ಪಂ ಅಧ್ಯಕ್ಷೆ ಜಾನಕಿ ಅಲೆಂಗಾರ, ಕಾಪು ವಿಧಾನ ಸಭಾಕ್ಷೇತ್ರದ ವಿಶ್ವಕರ್ಮ ಯುವ ವೇದಿಕೆಯ ಅಧ್ಯಕ್ಷ ವೈ.ಗಣೇಶ್ ಆಚಾರ್ಯ ಉಚ್ಚಿಲ, ಮಂಗಳೂರು ಕಾಳಿಕಾಂಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಜಿತೇಂದ್ರ ಆಚಾರ್ಯ, ನಿಂತಿಕಲ್ಲು ವನದುರ್ಗಾದೇವಿ ಸಾನಿಧ್ಯದ ಆಡಳಿತ ಮಂಡಳಿ ಅಧ್ಯಕ್ಷ ರೂಪರಾಜ ರೈ.ಕೆ, ವಾಸ್ತು ಶಿಲ್ಪಿ ಕೃಷ್ಣ ಆಚಾರ್ಯ ಕುಕ್ಕಂದೂರು ಕಾರ್ಕಳ, ಕಡಬ ಶ್ರೀದೇವಿ ಗೋಲ್ಡ್ ಪ್ಯಾಲೇಸ್‌ನ ಕೆ.ಎಸ್ ದಿನೇಶ್ ಆಚಾರ್ಯ, ಪುತ್ತೂರು ಪ್ರಕಾಶ್ ಜ್ಯುವೆಲ್ಲರ್ಸ್ ನ ಉಮೇಶ್ ಆಚಾರ್ಯ ರವರು ಶುಭಹಾರೈಸಿದರು. ದ.ಕ.ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಪರಾಸ್ತಾವಿಕ ಮಾತನಾಡಿದರು. ಸಮಹಾದಿ ಶ್ರೀ ರಾಮಾಂಜನೇಯ ಭಜನಾ ಮಂದಿರದ ಸಂಚಾಲಕ ವಸಂತ ನುಡುಬೈಲು ಸ್ವಾಗತಿಸಿ, ಪುರೋಹಿತ್ ಬಾಲಕೃಷ್ಣ ಆಚಾರ್ಯ ಕುಕ್ಕಟ್ಟೆ ವಂದಿಸಿದರು. ಶಿಕ್ಷಕಿ ರಶ್ಮೀ ಮತ್ತು ಪ್ರದೀಪ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.

ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಮೂಲ ಸೌಕರ್ಯ ಅಭಿವೃದ್ಧಿಗೆ ಶಾಸಕರ 2019-20ನೇ ಸಾಲಿನ ಪ್ರದೇಶ ಅಭಿವೃದ್ಧಿ ಯೋಜನೆಯಿಂದ ರೂ ಐದು ಲಕ್ಷ ಹಾಗೂ ಧಾರ್ಮಿಕ ಧತ್ತಿ ಇಲಾಖೆ ಮೂಲಕ ಹೆಚ್ಚಿನ ಅನುದಾನವನ್ನು ನೀಡಲಾಗುವುದು – ಎಸ್ ಅಂಗಾರ ಶಾಸಕರು, ಸುಳ್ಯ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.