HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಜೂ.15-16: ಪುತ್ತೂರಿನಲ್ಲಿ ಹಲಸು ಸಾರ ಮೇಳ

Puttur_Advt_NewsUnder_1
Puttur_Advt_NewsUnder_1


ಪುತ್ತುರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ನಟರಾಜ ವೇದಿಕೆಯಲ್ಲಿ ಜೂ.15 ಹಾಗೂ 16 ರಂದು ಹಲಸು ಸಾರ ಮೇಳ ನಡೆಯಲಿದೆ ಎಂದು ಹಲಸು ಮೇಳದ ಅಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಹಲಸು ಸ್ನೇಹ ಸಂಗಮ, ಐ.ಐ.ಹೆಚ್.ಆರ್, ಹೇಸರಘಟ್ಟ ಬೆಂಗಳೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಜೇಸಿಐ ಪುತ್ತೂರು ಇವರ ಸಹಯೋಗದಲ್ಲಿ ಮೇಳ ನಡೆಯಲಿದೆ ಎಂದು ಅವರು ಹೇಳಿದರು. ಹಲಸು ಸ್ನೇಹ ಸಂಗಮದ ಕಾರ್ಯದರ್ಶಿ ಸುಹಾಸ್ ಎ.ಪಿ ಅವರು ಮಾತನಾಡಿ ಐ.ಐ.ಹೆಚ್.ಆರ್ ನ ನಿರ್ದೇಶಕ ಡಾ.ದಿನೇಶ್ ಮೇಳವನ್ನು ಉದ್ಘಾಟಿಸಲಿದ್ದಾರೆ.

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ, ಮುಳಿಯ ಜ್ಯುವೆಲ್ಲರ್ಸ್ ನ ಮುಳಿಯ ಕೃಷ್ಣನಾರಾಯಣ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ನಗರಸಭಾ ಸದಸ್ಯ ಶಕ್ತಿಸಿನ್ಹ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಹಲಸಿನ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕುರಿತು ಅಡಿಕೆ ಪತ್ರಿಕೆ ಕಾರ್ಯನಿರ್ವಾಕ ಸಂಪಾದಕ ಶ್ರೀಪಡ್ರೆ ಮತ್ತು ವೈಭವ್ ಬಿ.ಎಸ್ ಅವರು ಮಾಹಿತಿ ನೀಡಲಿದ್ದಾರೆ.

ಮಧ್ಯಾಹ್ನ ಹಲಸಿನ ತಳಿಗಳು, ಕೃಷಿಕ್ರಮಗಳು, ತಾಂತ್ರಿಕತೆ ಮತ್ತು ಅವಕಾಶಗಳು ಕುರಿತು ಡಾ.ಜಿ.ಕರುಣಾಕರನ್ ಮತ್ತು ಡಾ.ಹೆಚ್.ಸಿ.ಪ್ರಸನ್ನ ಅವರು‌ ಮಾಹಿತಿ ಮಾತುಕತೆ ನಡೆಸಿಕೊಡಲಿದ್ದಾರೆ. ಜೂ.16 ಕ್ಕೆ ವರ್ಮುಡಿ ಶಿವಪ್ರಸಾದ್ ಅವರಿಂದ ಹಲಸು ಕೃಷಿ ಅನುಭವ ನಡೆಸಿಕೊಡಲಿದ್ದಾರೆ. ನಳಿನಿ ಮಾಯಿಲಂಕೋಡಿ ಮತ್ತು ಎ.ಪಿ.ಉಮಾಶಂಕರಿ ಮರಿಕೆ ಅವರಿಂದ ಅಡುಗೆ ಖಾದ್ಯಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜೆಸಿಐ ಅಧ್ಯಕ್ಷ ಗೌತಮ ರೈ, ಪ್ರಕಾಶ್ ಕೊಡೆಂಕಿರಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.