ಯುವವಾಹಿನಿ ಸಂಚಲನ ಸಮಿತಿ ಶಿರ್ಲಾಲು ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ

0

ಶಿರ್ಲಾಲು: ಯುವವಾಹಿನಿ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಶಿರ್ಲಾಲು ಸಿ. ಎ ಬ್ಯಾಂಕ್ ಸಬಾಭವನದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿಯ ನಿಕಟಪೂರ್ವ ಅಧ್ಯಕ್ಷರು ಪ್ರಕಾಶ್ ಕಟ್ರಬೈಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ  ದೀಪ ಬೆಳಗಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ನಿರ್ದೇಶಕ ಎಮ್.ಕೆ ಪ್ರಸಾದ್ ಯುವವಾಹಿನಿ ಘಟಕದ ಅಧ್ಯಕ್ಷರು ಸುಜಾತಾ ಅಣ್ಣಿ ಪೂಜಾರಿ, ನಿಯೋಜಿತ ಅಧ್ಯಕ್ಷ ಅಶ್ವಥ್ ಕುಮಾರ್ ಶಿರ್ಲಾಲು ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಹರೀಶ್ ನೇತ್ರಬೈಲ್ ಯುವಾ ಬಿಲ್ಲವ ವೇದಿಕೆ ಅಧ್ಯಕ್ಷ ಹರೀಶ್ ಕಲ್ಲಾಜೆ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಶ್ರೀಮತಿ ಕುಶಲಾ ರಮೇಶ್ ಯುವವಾಹಿನಿ ಘಟಕದ ನಿಯೋಜಿತ ಅಧ್ಯಕ್ಷ ಜಯ ಕುಮಾರ್ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಕೋಟ್ಯಾನ್ ಪಾಲನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಚಲನ ಸಮಿತಿಯ ವಿದ್ಯಾ ನಿಧಿಯನ್ನು ಕಾವ್ಯ ಇವರನ್ನು ಗುರುತಿಸಿ ಹಸ್ತಾಂತರ ಮಾಡಲಾಯಿತು.
ಈವರೆಗೆ ಅನೇಕ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ ಯುವವಾಹಿನಿಯ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕಟ್ರಬೈಲ್ ಇವರನ್ನು ಶಿರ್ಲಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗೌರವಿಸಲಾಯಿತು.

ಸಾಮೂಹಿಕ ನಾರಾಯಣ ಗುರು ಪ್ರಾಥನೇ ಯೊಂದಿಗೆ ಪ್ರಾರಂಭಗೊಂಡು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಯುವಾ ವಾಹಿನಿಯ ಶಿರ್ಲಾಲು ಸಂಚಲನ ಸಮಿತಿಯ ಪದಾಧಿಕಾರಿ ದಿನೇಶ್ ಕರ್ದೋಟು ಸ್ವಾಗತಿಸಿದರು. ಸಂಚಲನ ಸಮಿತಿಯ ವಾರ್ಷಿಕ ವರದಿಯನ್ನು ನಿಕಟಪೂರ್ವ ಕಾರ್ಯದರ್ಶಿ ಜಯ ಕುಮಾರ್ ವಾಚಿಸಿದರು.

ರಂಜಿತ್ ಅಜೀರೋಲಿ ಕಾರ್ಯಕ್ರಮ ನಿರೂಪಿಸಿದರು ಜ್ಞಾನೆಸ್ ಕುಮಾರ್ ಕಟ್ಟ ಧನ್ಯವಾದ ನೆರವೇರಿಸಿದರು. ವಿಜಯ್ ಕುಮಾರ್ ಮತ್ತು ಸದಾಶಿವ ಊರ ಸಹಕರಿಸಿದರು.

LEAVE A REPLY

Please enter your comment!
Please enter your name here