ಪುತ್ತೂರು: ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿಯಲ್ಲಿ ಒಂದು ತಿಂಗಳ ಕಾಲ ಸ್ವಚ್ಛ ಮೇವ ಜಯತೇ ಆಂದೋಲನ ನಡೆಯುತ್ತಿದ್ದು, ಜೂ.11 ರಂದು ಚಿಕ್ಕಮುಡ್ನೂರು ಶಾಲೆಯಲ್ಲಿ ಬನ್ನೂರು ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛತಾ ಆಂದೋಲನ ಮತ್ತು ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯೆ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ದನ ,ದ.ಕ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಯೋಜನಾ ಸಂಯೋಜಕ ಪ್ರಜ್ಞಾ ಸಲಹಾಕೇಂದ್ರ ವಿಲಿಯಂ ಸ್ಯಾಮುವೆಲ್, ಕೆಎಂಸಿ ಆಸ್ಪತ್ರೆಯ ಶಿಬಿರ ಸಂಯೋಜಕ ಹರ್ಬರ್ಟ, ಪಂಚಾಯತ್ ಪಿಡಿಒ ಶಾಂತರಾಮ್, ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಣಿ ಡಿ ಗಾಣಿಗ, ಉಪಾಧ್ಯಕ್ಷ ಜಿನ್ನಪ್ಪ ಗೌಡ, ಪಂಚಯತ್ ಸದಸ್ಯರಾದ ಗಿರಿಜಾ, ಜಯ, ರತ್ನಾಕರ ಪ್ರಭು, ಅಣ್ಣಿ ಪೂಜಾರಿ, ಆಶಾಕಾರ್ಯಕರ್ತೆಯರಾದ ಸಂಧ್ಯಾ, ಚಂದ್ರಾವತಿ, ಶ್ರೀ ಮುರಳಿ, ಸಂಪತ್ ಕುಮಾರ್ ಜೈನ್, ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾ, ಶಾಲಾ ಶಿಕ್ಷಕರಾದ ಜುಲಿಯಾನ, ಶ್ರೀಕಾಂತ್ ನಾಯಕ್ ,ಶಶಿಕಲಾ, ಮಕ್ಕಳ ಪೋಷಕರು ಸೇರಿಂದತೆ ಊರವರು ಉಪಸ್ಥಿತರಿದ್ದರು.