ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀಪಾವಳಿಯ ಸಂಭ್ರಮ

0

ಬೆಳ್ತಂಗಡಿ:  ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ನ 5ರಂದು ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಬೆಳ್ತಂಗಡಿ ವಿಮುಕ್ತಿ ಸಂಸ್ಥೆ ಮತ್ತು ದಯಾ ವಿಶೇಷ ಶಾಲೆಯ ನಿರ್ದೇಶಕರಾದ ಫಾ. ವಿನೋಲ್ ಮಸ್ಕರೇನಸ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಹಬ್ಬಗಳ ಮಹತ್ವದ ಜೊತೆಗೆ ಏಕತಾ ಮನೋಭಾವವನ್ನು ಎಳವೆಯಲ್ಲೇ ಮೂಡಿಸಬಹುದೆಂದು ತಿಳಿಸಿದರು.

ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಮುಖ್ಯ ಅತಿಥಿಯವರನ್ನು ಪರಿಚಯಿಸಿ, ಅಂಧಕಾರವೆಂಬ ಕತ್ತಲೆಯನ್ನು ದೀಪವು ಹೊಡೆದೋಡಿಸುವಂತೆ ನಾವು ಜ್ಞಾನವೆಂಬ ಬೆಳಕಿನಿಂದ ಅಜ್ಞಾನವನ್ನು ದೂರ ಮಾಡಬೇಕೆಂದು ನುಡಿದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕು. ಸಾನ್ವಿ ದೀಪಾವಳಿ ಹಬ್ಬದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಪ್ರಾರ್ಥನಾ ವಿಧಿಯನ್ನು ನೆರವೇರಿಸಿ, ದೀಪಾವಳಿ ಹಬ್ಬದ ಹಿನ್ನೆಲೆ ಹಾಗೂ ಮಹತ್ವವನ್ನು ಹಾಡು, ನೃತ್ಯದ ಮೂಲಕ ಎಲ್ಲರನ್ನೂ ಮನರಂಜಿಸಿದರು. ಪಟಾಕಿ ಹಚ್ಚುವಾಗ ಪಾಲಿಸಬೇಕಾದ ಮುಂಜಾಗ್ರತೆಯನ್ನು ಮೂಕಾಭಿನಯದ ಮೂಲಕ ತಿಳಿಸಿದರು. ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಪೌಲಿನ್ ರೆಗೋ ಮತ್ತು ಚರ್ಚ್ ನ 21 ಆಯೋಗಗಳ ಸಂಯೋಜಕರಾದ ಶ್ರೀ ವಿನ್ಸೆಂಟ್ ಡಿಸೋಜ, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಬೊನವೆಂಚರ್ ಪಿಂಟೋ ಮತ್ತು ಜೊತೆ ಕಾರ್ಯದರ್ಶಿ ಶ್ರೀಮತಿ ವಿಲ್ಮಾ ರೇಗೊ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆಧ್ಯಾ ಬಿ. ಆರ್ ಮತ್ತು ಅನೀಶಾ ಡೇಸಾ ಸ್ವಾಗತಿಸಿ, ಫಾತಿಮತ್ ಸನ ವಂದಿಸಿದರು. ಸುಝಾನ ಮತ್ತು ಫಾತಿಮತ್ ಅಫ್ರತ್ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಶ್ರೀಮತಿ ಮೇರಿ ಸುಜಾ, ಶ್ರೀಮತಿ ಪ್ರಭಾ ಗೌಡ ಹಾಗೂ ಕು. ದಿವ್ಯಾ. ಜಿ ಸಹಕರಿಸಿದರು.

LEAVE A REPLY

Please enter your comment!
Please enter your name here