ಕೊಯ್ಯೂರು :ಕೊಯ್ಯೂರು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಪಂಚದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾ ಸಂಘದ ನೇತೃತ್ವದಲ್ಲಿ ಶ್ರೀ ಪಂಚದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕೊಯ್ಯೂರು ದೇವಸ್ಥಾನ ಇದರ ಸಹಯೋಗದಲ್ಲಿ ಯಕ್ಷಗಾನ ತಾಳಮದ್ದಳೆ ಪಂಚಾಹ 2022 ಕೀರ್ತಿ ಶೇಷ ಕುಂಟಿನಿ ಕೃಷ್ಣ ಬಾಂಗಿಣ್ಣಾಯ ಸಂಸ್ಮರಣಾ ತಾಳಮದ್ದಳೆ ಉದ್ಘಾಟನಾ ನ. 9 ರಂದು ನಡೆಯಿತು.
ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಕೆ.ಬಿ.ಹರಿಶ್ಚಂದ್ರ ಬಳ್ಳಾಲ್ ವಹಿಸಿದ್ದರು.
ಯಕ್ಷಭಾರತಿ ಕನ್ಯಾಡಿ ಇದರ ಕಾರ್ಯದರ್ಶಿ ಗೇರುಕಟ್ಟೆ ದಿವಾಕರ ಆಚಾರ್ಯ, ಕೊಯ್ಯೂರು ಹಾಲು ಉ. ಸ.ಸಂಘದ ಅಧ್ಯಕ್ಷ ಕೃಷ್ಣ ಭಟ್ ,ಮಲೆಬಿಟ್ಟು ಹಾಲು ಉ. ಸ. ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಹಲೆಕ್ಕಿ, ಸುಧಾಂಶು ಗೇರುಕಟ್ಟೆ, ಫೆಡರಲ್ ಬ್ಯಾಂಕ್ ಕೊಯ್ಯೂರು ಶಾಖೆಯ ಅಧಿಕಾರಿ ಸುಮಂತ್, ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು. ರಾಮಕೃಷ್ಣ ಭಟ್ ಸಂಸ್ಮರಣಾ ನುಡಿ ನಮನ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಅಶೋಕ್ ಕುಮಾರ್ ಬಾಂಗಿಣ್ಣಾಯ ಸ್ವಾಗತಿಸಿದರು.ದೇವಿಪ್ರಸಾದ್ ಪ್ರಾರ್ಥಿಸಿ, ಸುವರ್ಣ ಕುಮಾರಿ ಗೇರುಕಟ್ಟೆ ಇವರು ಕಾರ್ಯಕ್ರಮ ನಿರೂಪಿಸಿದರು. ವಿಜಯ ಕುಮಾರ್ ಎಂ ಧನ್ಯವಾದ ಅರ್ಪಿಸಿದರು.