HomePage_Banner
HomePage_Banner
HomePage_Banner
HomePage_Banner
Breaking News

ಬೀರಮಲೆ ಬೆಟ್ಟ ಅಭಿವೃದ್ಧಿ ಸಮಿತಿ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಬೀರಮಲೆ ಬೆಟ್ಟ ಅಭಿವೃದ್ಧಿ ಸಮಿತಿಯ ವಾರ್ಷಿಕ ಮಹಾಸಭೆ ಬೀರಮಲೆ ಬೆಟ್ಟದ ಸಾಲುಮರದ ತಿಮ್ಮಕ್ಕ ವೃಕ್ಷೆದ್ಯಾವನದ ನೂತನ ಸಭಾಂಗಣದಲ್ಲಿ ಜೂ. 78ರಂದು ನಡೆಯಿತು. ಸಮಿತಿಯ ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಎ. ವಿ. ನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ 70ರ ದಶಕದಲ್ಲಿ ಅಂದಿನ ಪುತ್ತೂರಿನ ಹಿರಿಯ ವ್ಯಕ್ತಿಗಳಾಗಿದ್ದ ರಾಮ್ ಭಟ್, ಜಿ.ಎಲ್. ಆಚಾರ್ಯ, ರತ್ನಾಕರ ಶೆಣೈ ಕುಂಜಾಡಿ, ರಘುನಾಥ್ ರೈ ಮೊದಲಾದವರು ಸೇರಿಕೊಂಡು ಆಗ ತಹಶೀಲ್ದರರಾಗಿದ್ದ ಸಿ. ಹೆಚ್. ಕೋಚಣ್ಣ ರೈಯವರು ಈ ಬಿರುಮಲೆ ಬೆಟ್ಟದ ಶ್ರೇಷ್ಟತೆಯನ್ನು ಮನಗಂಡು ಅದನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಿದರು.

ಅಂದಿನಿಂದ ಇಂದಿನವರೆಗೆ ಅವರು ವಿವಿಧ ರೀತಿಯ ಸಂಘ ಸಂಸ್ಥೆಗಳು, ಸಾಧ್ಯವಿರುವ ಎಲ್ಲಾ ರೀತಿಯ ಸರಕಾರಿ ಅನದಾನಗಳು, ಅಜೀವ ಸದಸ್ಯರುಗಳು, ದಾನಿಗಳು ಇವರೆಲ್ಲರ ಸಹಾಯದಿಂದ ಬೀರಮಲೆ ಬೆಟ್ಟ ಅಭಿವೃದ್ಧಿಯನ್ನು ಸಾಧಿಸಿದ ಬಗ್ಗೆ ಹೇಳಿದರು ಅಲ್ಲದೆ ಮುಂದೆ ನಾವು ಅದನ್ನು ಉಳಿಸಿ ಇನ್ನಷ್ಟು ಎತ್ತರಕ್ಕೆ ಬೆಳೆಸುವ ಈ ಪುತ್ತೂರಿನ ನಾಗರಿಕರೆಲ್ಲರ ಜವಾಬ್ದಾರಿಯನ್ನು ತಿಳಿಸಿದರು.

2016ರಲ್ಲಿ ರಚನೆಯಾಗಿದ್ದ ಕಾರ್ಯಕಾರಿ ಸಮಿತಿಯ 3 ವರ್ಷಗಳ ಅವಧಿಯು ಪೂರ್ಣಗೊಂಡಿರುವ ಕಾರಣ ಮುಂದಿನ 3 ವರ್ಷಗಳ ಅವಧಿಗೆ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ನೆರೆದಿದ್ದ ಬೀರಮಲೆಯ ಅಭಿಮಾನಿ ಬಂಧುಗಳು ಮುಂದಿನ ಅಭಿವೃದ್ಧಿ ರೂಪುರೇಷೆಗಳ ಬಗ್ಗೆ ಪೂರಕವಾದ ಸಲಹೆಯನ್ನಿತ್ತರು.

ಅರಣ್ಯಾಧಿಕಾರಿ ಶಿವಾನಂದ ಆಚಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಿ.ಎಸ್. ಶಾಸ್ತ್ರಿ, ಎಮ್. ಗೋಪಾಲ ಕೃಷ್ಣ ಭಟ್, ನಾರಾಯಣ ನಾಯಕ್, ಅಬಿಜಿತ್ ರೈ, ಸಂದೀಪ್ ರೈ, ಇಂದಿರಾ ಪಿ ಆಚಾರ್ಯ, ಗೋಪಿನಾಥ್ ಶೆಟ್ಟಿ, ಎಮ್.ಎನ್. ರಘುನಾಥ್ ರಾವ್, ವಿ.ಕೆ ಜೈನ್ , ಸೂರ್ಯನಾಥ್ ಆಳ್ವ, ಚಂದ್ರಶೇಖರ್ ಆಳ್ವ, ರಾಧಾಕೃಷ್ಣ ನಂದಿಲಾ, ಸಂತೋಷ್ ಶೆಟ್ಟಿ, ಡಾ. ಶರತ್ ಆಳ್ವ, ವಿಶ್ವಪ್ರಸಾದ್ ಸೇಡಿಯಾಪು, ದಂಬೆಕಾನ ಸದಾಶಿವ ರೈ, ಎನ್. ಜಯರಾಮ್ ಭಂಡಾರಿ, ಡಾ. ಶ್ರೀಶ ಕುಮಾರ್, ಝೇವಿಯರ್ ಡಿ ಸೋಜಾ, ಶಿವಾನಂದ ಶೇಟ್, ಪೂರ್ಣೇಶ್ ಕುಮಾರ್, ಸಂತೋಷ್ ಭಂಡಾರಿ, ನೀನಾಕ್ಷಿ ಎಸ್ ಭಂಡಾರಿ, ಶಿವರಾಮ್ ಆಳ್ವ, ದರ್ಶನ ಎನ್. ಶೆಟ್ಟಿ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಎ.ಜಗಜ್ಜೀವನ್‌ದಾನ್ ರೈ ವಾರ್ಷಿಕ ವರದಿ ಓದಿ, ಕೋಶಾಧಿಕಾರಿ ಎಮ್. ಎಸ್. ಅಮ್ಮಣ್ಣಾಯ ಸಂಸ್ಥೆಯ ಆಯವ್ಯಯ ಪತ್ರ ಮಂಡಿಸಿದರು. ಸಮಿತಿ ಸದಸ್ಯರಾದ ನಿತಿನ್ ಪಕ್ಕಳ, ಶಾಂತಕುಮಾರ್, ಮನೋಜ್ ಶಾಸ್ತ್ರಿ, ದೇವದಾಸ್ ಆಳ್ವ ಸಹಕರಿಸಿದರು. ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯೆ ಡಾ. ಸತ್ಯವತಿ ಆಳ್ವ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.