Home_Page_Advt
Home_Page_Advt
Home_Page_Advt

ತೆಲುಗು ಕಿರುತೆರೆಯ ನಂಬರ್ ಒನ್ ನಟಿ ಚೈತ್ರಾ ರೈ ಕೋಡಿಂಬಾಡಿಗೆ ಭೇಟಿ

 

ಪುತ್ತೂರು: ಕನ್ನಡದ ಕಿರುತೆರೆಯ ಹಲವಾರು ಧಾರವಾಹಿಗಳಲ್ಲಿ ಮಿಂಚಿರುವ ಮತ್ತು ತೆಲುಗು ಕಿರುತೆರೆಯಲ್ಲಿ ನಂಬರ್ ಒನ್ ನಟಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ರೈಯವರು ತನ್ನ ತವರೂರಾದ ಕೋಡಿಂಬಾಡಿಯ ಮಠಂತಬೆಟ್ಟು ಸಂಪಿಗೆದಡಿಗೆ ಭೇಟಿ ನೀಡಿದ್ದಾರೆ.

ಉದಯ ಟಿ.ವಿ ಯಲ್ಲಿ ಪ್ರಸಾರವಾಗುತ್ತಿದ್ದ `ಕುಸುಮಾಂಜಲಿ’, `ಬಣ್ಣದ ಬುಗರಿ’ `ಯುಗಾದಿ’, ಸುವರ್ಣ ವಾಹಿನಿಯ `ಬೊಂಬೆಯಾಟವಯ್ಯ’, `ಕಸ್ತೂರಿ ಚಾನೆಲಿನ `ಪೌರ್ಣಮಿ’ `ನಾಗಮಣಿ’, ಝಿ ಕನ್ನಡದ `ರಾಧಾ ಕಲ್ಯಾಣ’ದಲ್ಲಿ ಅಭಿನಯಿಸಿ ಮಿಂಚಿದ್ದ ಹಾಗೂ ಕನ್ನಡ ಕಿರುಚಿತ್ರ `ಜಲದಿಗೆರೆ ಮಹಾತ್ಮೆ’ ಮತ್ತು ಪ್ರಜ್ವಲ್ ದೇವರಾಜ್-ನಿಖಿತಾ ಅಭಿನಯದ ಸೂಪರ್ ಹಿಟ್ ಚಿತ್ರ `ಜಂಬೂ ಸವಾರಿ’ಯಲ್ಲಿ ನಟಿಸಿ ಗಮನ ಸೆಳೆದಿದ್ದ ಚೈತ್ರಾ ರೈಯವರು ಇದೀಗ ತೆಲುಗು ಕಿರುತೆರೆಯ ಜೆಮಿನಿ ಟಿ.ವಿ ಯ `ಅತ್ತೋ ಅತ್ತಮ್ಮ ಕುತುರೊ’, ಈ ಟಿ.ವಿಯ `ಅಲ ಮೊದಲೈಂದಿ, ಒಕರಿಕಿ ವೊಕರು’, ಮಾ ಟಿ.ವಿಯ `ಅಷ್ಟ ಚಮ್ಮಾ’, ಝಡ್ ತೆಲುಗುವಿನ `ತೆಲುಗು ದಾಟ್ ಈಸ್ ಮಹಾಲಕ್ಷ್ಮೀ’ ಮತ್ತು ಈಗ ಝಡ್ ತೆಲುಗುವಿನಲ್ಲಿ ಪ್ರಸಾರವಾಗುತ್ತಿರುವ `ಅತ್ತಾರಿಂಟ್ಲೊ ಅಕ್ಕ ಚೆಲ್ಲಿಲು’ ಹಾಗೂ ಸ್ಟಾರ್ ಮಾದಲ್ಲಿ ಪ್ರಸಾರಗೊಳ್ಳುತ್ತಿರುವ `ಮನಸುನ ಮನಸೈ’ ಮುಂತಾದ ಧಾರವಾಹಿಗಳಲ್ಲಿ ನಟಿಸಿ ಪ್ರಸಿದ್ಧ ಹಾಗೂ ಶ್ರೇಷ್ಠ ಕಿರುತೆರೆ ನಟಿ ಪ್ರಶಸ್ತಿ ವಿಜೇತರಾಗಿರುವ ಚೈತ್ರಾ ರೈಯವರು ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು- ಸಂಪಿಗೆದಡಿ ಮನೆಯ ಮೊಮ್ಮಗಳಾಗಿದ್ದಾರೆ.

ಸಂಪಿಗೆದಡಿಯಲ್ಲಿ ವಾಸು ರೈ ಮತ್ತು ಗುಲಾಬಿ ವಾಸು ರೈ ದಂಪತಿಯ ಪುತ್ರಿಯಾಗಿ ಜನಿಸಿದ್ದ ಚೈತ್ರಾ ರೈಯವರು ಬಾಲ್ಯತನವನ್ನು ಸಂಪಿಗೆದಡಿಯಲ್ಲಿಯೇ ಕಳೆದಿದ್ದರು. ನಂತರ ಮಡಿಕೇರಿ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾ ಬೆಳೆದು ಇದೀಗ ದಕ್ಷಿಣ ಭಾರತದ ಚಲನಚಿತ್ರ ಮತ್ತು ಕಿರುತೆರೆಗಳಲ್ಲಿ ಮಿನುಗುತ್ತಿರುವ ಚೈತ್ರಾರವರು ಪ್ರಸ್ತುತ ಹೈದರಾಬಾದ್‌ನಲ್ಲಿ ವಾಸವಿದ್ದಾರೆ. ತನ್ನ ಹುಟ್ಟೂರಿನ ಮೇಲೆ ಅಪಾರ ಪ್ರೀತಿ ಹೊಂದಿರುವ ಚೈತ್ರಾ ರೈಯವರು ಇತ್ತೀಚೆಗೆ ನಡೆದ ತನ್ನ ಸಂಬಂಧಿಕ ಯೋಗೀಶ್ ಸಾಮಾನಿಯವರ ಮದುವೆಯ ಸಮಯದಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಹಿನ್ನೆಲೆಯಲ್ಲಿ ಇದೀಗ ಮಠಂತಬೆಟ್ಟು ಸಂಪಿಗೆದಡಿಗೆ ಆಗಮಿಸಿ ಯೋಗೀಶ್ ಸಾಮಾನಿ ದಂಪತಿಗೆ ಶುಭ ಹಾರೈಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.