Home_Page_Advt
Home_Page_Advt
Home_Page_Advt

ಸವಣೂರಿನಲ್ಲಿ 1 ಕೋಟಿ ವೆಚ್ಚದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ನಿರ್ಮಾಣ – ಎಪಿಎಂಸಿ ಅಸಿಸ್ಟೆಂಟ್ ಇಂಜಿನಿಯರಿಂದ ಸ್ಥಳ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಸವಣೂರಿನಲ್ಲಿ ಎಪಿಎಂಸಿ ವತಿಯಿಂದ ಸುಸಜ್ಜಿತವಾದ ಸಂತೆ ಮಾರುಕಟ್ಟೆಯು ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದರ ಸ್ಥಳ ಪರಿಶೀಲನೆಗೆ ಎಪಿಎಂಸಿಯ ಅಸಿಸ್ಟೆಂಟ್ ಇಂಜಿನಿಯರ್ ಗುರುಪ್ರಸಾದ್‌ರವರು ಜೂ. 11 ರಂದು ಸವಣೂರಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಕಾರ್‍ಯದರ್ಶಿ ರಾಮಚಂದ್ರ ಸವಣೂರು, ಸವಣೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸದಸ್ಯರಾದ ಗಿರಿಶಂಕರ್ ಸುಲಾಯ ದೇವಸ್ಯ, ಸತೀಶ್ ಅಂಗಡಿಮೂಲೆ, ಮಾಜಿ ಸದಸ್ಯ ಮೋಹನ್ ದೇವಾಡಿಗ, ಸವಣೂರು ಸಿ.ಎ, ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಪ್ರಿತ್ ರೈ ಖಂಡಿಗ, ಸ್ಥಳೀಯರಾದ ರಾಮಕೃಷ್ಣ ಪ್ರಭು, ಉಮ್ಮರ್ ಅರಿಗಮಜಲು, ಸವಣೂರು ಗ್ರಾ.ಪಂ, ಸಿಬ್ಬಂಧಿ ಪ್ರಮೋದ್ ಕುಮಾರ್ ರೈರವರುಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.