ಪುತ್ತೂರು: ಚಿಲ್ಮೆತ್ತಾರು ಸಂಜೀವ ರೈ ಮತ್ತು ಕಾಟುಕುಕ್ಕೆ ದೇವಶ್ಯಗುತ್ತು ಲಲಿತ ಸಂಜೀವ ರೈಯವರ ದಾಂಪತ್ಯ ಜೀವನದ ಸುವರ್ಣ ಸಂಭ್ರಮ ಸಮಾರಂಭವು ಜೂ.9 ರಂದು ಕಾಟುಕುಕ್ಕೆ ಶ್ರೀಸುಬ್ರಾಯ ದೇವರ ಸನ್ನಿಧಿಯಲ್ಲಿ ಶ್ರೀಸತ್ಯನಾರಾಯಣ ಪೂಜೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಕ್ಷೇತ್ರದ ಪ್ರಧಾನ ಆರ್ಚಕರಾದ ನಾರಾಯಣ ಮಯ್ಯ ರವರು ಫಲ-ಪುಷ್ಪ ನೀಡಿ ಆಶೀರ್ವದಿಸಿದರು. ದೇವಾಲಯದ ಆಡಳಿತ ಸಮತಿಯ ಚಯರ್ಮೆನ್ ನಾರಾಯಣ ರವರು ಸಂಜೀವ ರೈ ದಂಪತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಮೊಕ್ತೆಸರರಾದ ರಘುನಾಥ ರೈ, ಈಶ್ವರ ನಾಯ್ಕ, ಬಾಬು ಪೆರ್ಲತಡ್ಕ ಶಾಲು ಹೊದಿಸಿ ಸನ್ಮಾನಿಸಿದರು.
ಶ್ರೀಸುಬ್ರಹ್ಮಣ್ಯೆಶ್ವರ ವಿದ್ಯಾಸಂಸ್ಥೆಯ ಪರವಾಗಿ ಮೆನೇಜರ್ ಮಿತ್ತೂರು ಪುರುಷೋತ್ತಮ ಭಟ್ ಶಾಲುಹೊದಿಸಿ ಗೌರವಿಸಿದರು. ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಫಲ-ಪುಷ್ಪ ನೀಡಿ ಗೌರವಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಾಜ ಕೃಷ್ಣಪ್ರಸಾದ ಭಂಡಾರಿ, ಚಲನಚಿತ್ರ ನಿರ್ಮಾಪಕ ಕುಂಬ್ರ ರಘುನಾಥ ರೈ, ಎ.ಕೆ.ಜಯರಾಮ ರೈ ಹಾಗೂ ಹಲವು ಗಣ್ಯರು ಆಗಮಿಸಿ ಶುಭಕೋರಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾರಾರ್ಪಣೆ ಸಲ್ಲಿಸಿ ಶುಭಕೋರಿದರು.