ಹಿರೇಬಂಡಾಡಿ: ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಶಾಲಾ ಕಾರ್ಯನಿರ್ವಹಣೆಯಲ್ಲಿ ನಾಯಕತ್ವ ಗುಣ ಬೆಳೆಸುವುದು, ಶಾಲಾಸಂಸತ್ತು ನಡೆಸುವ ಮತ್ತು ಪ್ರಜಾಪ್ರಭುತ್ವದ ಮಹತ್ವ ಅರಿಯುವ ಸಲುವಾಗಿ ಶಾಲಾ ಚುನಾವಣೆಯನ್ನು ನಡೆಸಲಾಯಿತು.
ಜೂ.4ರಂದು ಶಾಲಾ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಯಿತು. ಶಾಲಾ ನಾಯಕ ಸ್ಥಾನಕ್ಕೆ 10ನೇ ತರಗತಿಯಿಂದ ಚಿತ್ರ ಮತ್ತು ರಕ್ಷಿತ್ ಹೆಚ್ ಎಸ್ ಮತ್ತು ಉಪನಾಯಕ ಸ್ಥಾನಕ್ಕೆ ೯ನೇ ತರಗತಿಯಿಂದ ಧನರಾಜ್ ಮತ್ತು ಹರಿಣಾಕ್ಷಿಯವರು ನಾಮಪತ್ರ ಸಲ್ಲಿಸಿದ್ದರು. ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಶಾಲಾ ಆವರಣದಲ್ಲಿ ಚುನಾವಣಾ ಕಾರ್ಯದ ವಾತಾವರಣ ಸೃಷ್ಟಿಸಿ, ಮತಗಟ್ಟೆ ನಿರ್ಮಿಸಿ ಉಮೇದುದಾರರ ಹೆಸರು, ಚಿಹ್ನೆಹೊಂದಿರುವ ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಚುನಾವಣಾ ಪ್ರಕ್ರಿಯೆಯ ನಂತರ ಮತ ಎಣಿಕೆ ನಡೆದು ಚುನಾವಣಾ ಫಲಿತಾಂಶ ಘೋಷಿಸಲಾಯಿತು.
ರಕ್ಷಿತ್ ಹೆಚ್ ಎಸ್ ಶಾಲಾ ನಾಯಕನಾಗಿ, ಧನರಾಜ್ ಉಪನಾಯಕನಾಗಿ, ಚಿತ್ರ ವಿರೋಧ ಪಕ್ಷದ ನಾಯಕಿಯಾಗಿ ಮತ್ತು ಹರಿಣಾಕ್ಷಿ ವಿರೋಧ ಪಕ್ಷದ ಉಪನಾಯಕಿಯಾಗಿ ಚುನಾಯಿತರಾದರು. ಶಾಲಾ ಮುಖ್ಯಶಿಕ್ಷಕಿ ವೇದಾವತಿ ಎ ರವರ ಮಾರ್ಗದರ್ಶನದಲ್ಲಿ ಸಮಾಜಶಿಕ್ಷಕಿ ಲಲಿತ .ಕೆ ರವರು ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಹಿರಿಯ ಶಿಕ್ಷಕ ಹರಿಕಿರಣ್ ಕೆ ಅಧ್ಯಕ್ಷಧಿಕಾರಿಯಗಿ, ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮಗೌಡ .ಬಿ ಸೂಕ್ಷ್ಮ ವೀಕ್ಷಣಾಧಿಕಾರಿಯಾಗಿ, ಶಿಕ್ಷಕರಾದ ಮಹೇಂದ್ರ ಪೂಜಾರಿ .ಜಿ, ಫಿರೋಜ್ ನಾಯ್ಕ ಕೆ, ಯಶೋದಮ್ಮ ಟಿ ಕೆ, ವಸಂತ್ ಕುಮಾರ್ ಪಿ ಇವರು ಮತಗಟ್ಟೆ ಅಧಿಕಾರಿಗಳಾಗಿ, ಅನಿಲ್ ಕುಮಾರ್ ಹೆಚ್ ಪಿ ರವರು ತಾಂತ್ರಿಕ ಮತ್ತು ಚಿತ್ರೀಕರಣ ನೆರವು ನೀಡಿ ಸಹಕರಿಸಿದರು. ಒಟ್ಟಿನಲ್ಲಿ ಇಡೀ ಚುನಾವಣಾ ಪ್ರಕ್ರಿಯೆ ವಿದ್ಯಾರ್ಥಿಗಳಲ್ಲಿ ಪ್ರಜಾ ಪ್ರಭುತ್ವದಲ್ಲಿ ಚುನಾವಣೆ ಮಹತ್ವದ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.