Home_Page_Advt
Home_Page_Advt
Home_Page_Advt

ಫಲಾನುಭವಿ ವಿದ್ಯಾರ್ಥಿ ಸಹಿತ ಗ್ರಾಮಸ್ಥರೊಂದಿಗೆ ಮುಖ್ಯಮಂತ್ರಿ ವಿಡಿಯೋ ಕಾನ್ಫರೆನ್ಸ್

Puttur_Advt_NewsUnder_1
Puttur_Advt_NewsUnder_1
  • ಪೆರಾಬೆ-ಕುಂತೂರುನಲ್ಲಿ ಶಾಲಾ ಸಂಪರ್ಕ ಸೇತುವೆ ನಿರ್ಮಾಣ
  • ವಿದ್ಯಾರ್ಥಿಗಳ ಬೇಡಿಕೆ ಆಲಿಸಿದ ಹೆಚ್.ಡಿ. ಕುಮಾರಸ್ವಾಮಿ
  • ಸಂಪರ್ಕ ರಸ್ತೆ ದುರಸ್ಥಿಗೆ ಆಗ್ರಹ

ಉಪ್ಪಿನಂಗಡಿ: ಕಡಬ ತಾಲ್ಲೂಕು ಪೆರಾಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂತೂರು ಮಜಲು ಎಂಬಲ್ಲಿ `ಮುಖ್ಯಮಂತ್ರಿ ಶಾಲಾ ಸಂಪರ್ಕ ಸೇತು’ ಯೋಜನೆಯಡಿ ನಿರ್ಮಾಣವಾದ ಸೇತುವೆ ಫಲಾನುಭವಿಗಳೊಂದಿಗೆ ಮಂಗಳವಾರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಡಿಯೋ ಕಾನ್ಪೆರೆನ್ಸ್ ಮೂಲಕ ಮಾತುಕತೆ ನಡೆಸಿದರು.
ಸೇತುವೆ ಬಳಿಯಿಂದಲೇ ವಿಡಿಯೋ ಸಂವಾದ ನಡೆಸಿದ ಕುಂತೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಪ್ರತೀಕ್ಷಾ, ಸ್ಥಳೀಯ ನಿವಾಸಿ, ಶಿಕ್ಷಕ ಜಯಪ್ರಕಾಶ್ ರೈ ಸೇತುವೆಯ ನಿರ್ಮಾಣದ ಪ್ರಯೋಜನ, ಕಾಮಗಾರಿ ಬಗ್ಗೆ ಮುಖ್ಯಮಂತ್ರಿ ಜೊತೆ ವಿಷಯ ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿಯೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನೇನಾದರೂ ಸಮಸ್ಯೆ ಇದೆಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿ ಪ್ರತೀಕ್ಷಾ ಸೇತುವೆಯ ಸಂಪರ್ಕ ರಸ್ತೆಯನ್ನು ದುರಸ್ತಿ ಪಡಿಸಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದು ಶಾಲಾ ಶಿಕ್ಷಕಿ ವಿದ್ಯಾಮಂಜುಳ ಸುದ್ದಿಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಆಗುತ್ತಿದ್ದ ಆತಂಕ ದೂರವಾಗಿದೆ-ಜಯಪ್ರಕಾಶ್ ರೈ
ಸೇತುವೆ ನಿರ್ಮಾಣ ಅದರ ಉಪಯೋಗದ ಬಗ್ಗೆ ಮುಖ್ಯಮಂತ್ರಿ ಒಟ್ಟು 10 ನಿಮಿಷ ಮಾತನಾಡಿದ್ದಾರೆ. ಕುಂತೂರು ಮಜಲು ಎಂಬಲ್ಲಿ ಹರಿಯುತ್ತಿದ್ದ ತೋಡು ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುತ್ತದೆ, ಸುಮಾರು ೫೦ ಮನೆಯವರು ಅದರಲ್ಲೂ ಸುಮಾರು ೩೦ಕ್ಕೂ ಅಧಿಕ ವಿದ್ಯಾರ್ಥಿಗಳು ವರ್ಷಂಪ್ರತಿ ಆತಂಕದಿಂದಲೇ ಶಾಲೆಗೆ ಬರುತ್ತಿದ್ದರು. ಜೋರಾಗಿ ಮಳೆ ಬಂದರೆ ವಿದ್ಯಾರ್ಥಿಗಳು ಗೈರು ಹಾಜರಿ ಆಗುತ್ತಿದ್ದರು. ಆದರೆ ಇದೀಗ ಎಲ್ಲಾ ಆತಂಕ ದೂರವಾಗಿದೆ, ಸೇತುವೆ ನಿರ್ಮಾಣ ಆಗಿರುವುದರಿಂದಾಗಿ ನಮಗೆ ತುಂಬಾ ಖುಷಿ ಆಗಿದ್ದು, ಇದನ್ನು ಮುಖ್ಯಮಂತ್ರಿ ಜೊತೆಗೆ ಹಂಚಿಕೊಂಡಿದ್ದೇವೆ ಎಂದು ಸೇತುವೆ ಫಲಾನುಭವಿ, ಶಿಕ್ಷಕ ಜಯಪ್ರಕಾಶ್ ರೈ ತಿಳಿಸಿದ್ದಾರೆ.

ಸುಮಾರು ೧೫ ವಿದ್ಯಾರ್ಥಿಗಳು ಒಳಗೊಂಡಂತೆ ಶಾಲಾ ಶಿಕ್ಷಕಿ ವಿದ್ಯಾ ಮಂಜುಳಾ, ಲೋಕೋಪಯೋಗಿ ಇಲಾಖಾ ಇಂಜಿನಿಯಾರ್ ಕನಿಷ್ಕ, ರವಿಚಂದ್ರ, ಫಲಾನುಭವಿ ಗ್ರಾಮಸ್ಥರು ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳ ಜೊತೆ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಇದ್ದರು.

ಬಹು ಉಪಯೋಗಿ ಸೇತುವೆ: ಮಳೆಗಾಲದಲ್ಲಿ ಅಪಾಯಕಾರಿಯಾಗಿ ತೋಡು ದಾಟುವ ಸಂದರ್ಭ ಅದೆಷ್ಟೋ ದುರ್ಘಟನೆಗಳು ಸಂಭವಿಸಿದೆ. ಪೋಷಕರು ಬೆಳಿಗ್ಗೆ ಮತ್ತು ಸಾಯಂಕಾಲ ತಮ್ಮ ಮಕ್ಕಳನ್ನು ತೋಡು ದಾಟಿಸಲು ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಮಲೆನಾಡಿನ ಶಾಲೆಯೊಂದರ ವಿದ್ಯಾರ್ಥಿಯೊಬ್ಬ ಕಾಲು ಸಂಕ ದಾಟುವಾಗ ಅಸುನೀಗಿದ ಸುದ್ದಿಯನ್ನು ಗಮನಿಸಿ ಮುಖ್ಯಮಂತ್ರಿಗಳು ಜಾರಿಗೆ ತಂದಿರುವ ಶಾಲಾ ಸಂಪರ್ಕ ಸೇತುವೆ ಯೋಜನೆಗೆ ಕುಂತೂರು ಮಜಲು ಎಂಬಲ್ಲಿ ಸೇತುವೆ ಬೇಡಿಕೆ ಸಲ್ಲಿಸಲಾಗಿತ್ತು. ಇದೀಗ ತ್ವರಿತಗತಿಯಲ್ಲಿ ಅನುಷ್ಠಾನವಾದ ಸೇತುವೆಯಿಂದಾಗಿ ಈ ಭಾಗದ ಜನ ಸಂತುಷ್ಟಗೊಂಡಿದ್ದಾರೆ. ಕುಂತೂರು ಮಜಲು, ಅರ್ಬಿ ಬೈಲು, ಕುದ್ರಡ್ಕ ಮೊದಲಾದ ಪರಿಸರದ ವಿದ್ಯಾರ್ಥಿಗಳು, ಸಾರ್ವಜನಿಕರು ಕುಂತೂರು, ಆಲಂಕಾರು, ಪೆರಾಬೆ ಮೊದಲಾದ ಪ್ರದೇಶಕ್ಕೆ ತೆರಳಲು ಈ ಸೇತುವೆ ಉಪಯೋಗವಾಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.