ನಿವೃತ್ತ ಯೋಧ, ವೇಣೂರು ಐ.ಟಿ.ಐಯ ನೇಮಕಾತಿ ಅಧಿಕಾರಿ ಎಂ.ಆರ್ ಜೈನ್ ವಿಧಿವಶ

0

ಬೆಳ್ತಂಗಡಿ: ಬೆಳ್ತಂಗಡಿ ಜೈನಪೇಟೆಯ ನಿವಾಸಿ ನಿವೃತ್ತ ಯೋಧ, ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐ.ಟಿ.ಐಯ ನೇಮಕಾತಿ ಅಧಿಕಾರಿ ಎಂ.ಆರ್ ಜೈನ್ (77ವ) ಅವರು ಅಲ್ಪಕಾಲದ ಅನಾರೋಗ್ಯದಿಂದ ನ.12 ರಂದು ವಿಧಿವಶರಾದರು.

ಇವರು 1986ರಲ್ಲಿ ಸ್ಥಾಪನೆಯಾದ ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕ ತರಬೇತಿ ಸಂಸ್ಥೆಯ ಸ್ಥಾಪಕ ಪ್ರಾಚಾರ್ಯರಾಗಿ, ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು.

ನಿವೃತ್ತಿಯ ಬಳಿಕ ಇದುವರೆಗೂ ಸಂಸ್ಥೆಯ ನೇಮಕಾತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು.

ಶಿಸ್ತಿನ ಸಿಫಾಯಿ ಎಂದೇ ಖ್ಯಾತರಾಗಿದ್ದ ಎಂ.ಆರ್.ಜೈನ್ ಸೇನೆಯಿಂದ ನಿವೃತ್ತಿಯ ಬಳಿಕ ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವ ಸ್ವಾತಂತ್ರೋತ್ಸವ, ಕನ್ನಡ ರಾಜೋತ್ಸವ, ಗಣರಾಜೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸಿ, ಪಥಸಂಚಲನಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.

ಮೃತರು ಪತ್ನಿ, ಒಂದು ಗಂಡು, ಮೂರು ಹೆಣ್ಣು ಮಕ್ಕಳನ್ನು ಬಂಧು, ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here