ನೆಲ್ಯಾಡಿ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ನೆಲ್ಯಾಡಿ ಶಾಖೆಯ 6ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಶಾಖಾ ಕಚೇರಿಯಲ್ಲಿ ಲಕ್ಷ್ಮೀ ಪೂಜೆ, ಗಣಹೋಮ ಜೂ.8ರಂದು ನಡೆಯಿತು.
ನೆಲ್ಯಾಡಿ ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಅರ್ಚಕ ಶ್ರೀಧರ ನೂಜಿನ್ನಾಯರವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಬಳಿಕ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿಯವರು ಮಾತನಾಡಿ, 2018-19ನೇ ಸಾಲಿನ ಲಾಭಾಂಶಗಳಿಕೆಯಲ್ಲಿ ನೆಲ್ಯಾಡಿ ಶಾಖೆಯು 2ನೇ ಸ್ಥಾನದಲ್ಲಿದೆ. ಇಲ್ಲಿನ ಸಾಲ ವಿತರಣೆ, ಠೇವಣಿ ಸಂಗ್ರಹ, ಸಾಲ ವಸೂಲಾತಿಯಲ್ಲಿನ ಪ್ರಗತಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಜೂ.30ರಂದು ಸಂಘದ ಮಹಾಸಭೆ ನಡೆಯಲಿದ್ದು ಸದಸ್ಯರು ಭಾಗವಹಿಸುವಂತೆ ಚಿದಾನಂದ ಬೈಲಾಡಿ ಹೇಳಿದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಗೌಡ, ನಿರ್ದೇಶಕರುಗಳಾದ ಮೋಹನ ಗೌಡ ಇಡ್ಯಡ್ಕ, ರಾಮಕೃಷ್ಣ ಗೌಡ ಕರ್ಮಲ, ಸಾಂತಪ್ಪ ಗೌಡ ಪಿಜಕ್ಕಳ, ಜಿನ್ನಪ್ಪ ಗೌಡ ಮುಳುವೇಲು, ಮಂಜುನಾಥ ಎನ್.ಎಸ್, ನೇತ್ರಾವತಿ ಕೆ.ಪಿ. ಗೌಡ, ರೇಖಾ ರಾಘವ ಗೌಡ, ನೆಲ್ಯಾಡಿ ಶಾಖೆಯ ಸಲಹಾ ಸಮಿತಿಯ ಚಂದ್ರಶೇಖರ ಗೌಡ ಬ್ರಂತೋಡು, ಸುಂದರ ಗೌಡ ಅತ್ರಿಜಾಲ್, ತುಕ್ರಪ್ಪ ಗೌಡ, ನೋಣಯ್ಯ ಗೌಡ ಡೆಬ್ಬೇಲಿ, ಡೊಂಬಯ್ಯ ಗೌಡ ಶಿರಾಡಿ, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಪುರಂದರ ಗೌಡ ಕಡೀರ, ಸುಪ್ರೀತಾ ರವಿಚಂದ್ರ ಹೊಸವೊಕ್ಲು, ಲೀಲಾವತಿ ಪ್ರಭಾನಂದ ಹೊಸಮನೆ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ .ಕೆ, ಕಡಬ ಶಾಖೆಯ ಮೇನೇಜರ್ ಧರ್ಮರಾಜ, ಕುಂಬ್ರ ಶಾಖಾ ಮ್ಯಾನೇಜರ್ ದಿನೇಶ್, ಉಪ್ಪಿನಂಗಡಿ ಶಾಖಾ ಮೇನೇಜರ್ ರೇವತಿ, ಎಕೌಂಟೆಂಟ್ ತೇಜಸ್ವಿನಿ, ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ನಿರ್ದೇಶಕ ರವಿಚಂದ್ರ ಹೊಸವೊಕ್ಲು, ವಾಸುದೇವ ಗೌಡ ಕೊಣಾಜೆ, ಡಿಸಿಸಿ ಬ್ಯಾಂಕ್ನ ನೆಲ್ಯಾಡಿ ಶಾಖಾ ಮೇನೇಜರ್ ವಿಶ್ವನಾಥ ಗೌಡ, ಗುರುದೇವ ಸೇವಾ ಸಹಕಾರ ಸಂಘದ ನೆಲ್ಯಾಡಿ ಶಾಖಾ ವ್ಯವಸ್ಥಾಪಕ ರಾಕೇಶ್ ಬಿ.ಎಲ್, ಅನುಗ್ರಹ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯ ಶ್ರೇಯಸ್ ಶೆಟ್ಟಿ, ನೆಲ್ಯಾಡಿಯ ಉದ್ಯಮಿ ಕುಶಾಲಪ್ಪ ಗೌಡ ಪೂವಾಜೆ, ನೆಲ್ಯಾಡಿ ಡೆಂಜ ಕಾಂಪ್ಲೆಕ್ಸ್ ಮಾಲಕ ಪುರಂದರ ಗೌಡ, ಬಿಎಸ್ಎನ್ಎಲ್ ಉದ್ಯೋಗಿ ಚಂದ್ರಶೇಖರ ಬಾಣಜಾಲು, ರಾಕೇಶ್, ಲಿಂಗಪ್ಪ ಗೌಡ, ಜಿನ್ನಪ್ಪ ಗೌಡ, ನೆಲ್ಯಾಡಿ ಕೋಟಿ ಚೆನ್ನಯ ಸಂಕೀರ್ಣದ ಮಾಲಕ ಗಣೇಶ್ ಪೂಜಾರಿ ಪೊಸೊಳಿಗೆ, ಹೊನ್ನಪ್ಪ ಗೌಡ ಡೆಬ್ಬೇಲಿ, ಪುಳಿಕ್ಕಲ್ ಟ್ರೇಡರ್ಸ್ನ ಜಾನ್ಸನ್ ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಶುಭಹಾರೈಸಿದರು.
ನೆಲ್ಯಾಡಿ ಶಾಖಾ ಸಲಹಾ ಸಮಿತಿ ಅಧ್ಯಕ್ಷ ನಾಗೇಶ್ ನಳಿಯಾರ್ ಸ್ವಾಗತಿಸಿ, ಶಾಖಾ ಪ್ರಬಂಧಕ ಶಿವಪ್ರಸಾದ್ ಅಗರ್ತ ವಂದಿಸಿದರು. ನೆಲ್ಯಾಡಿ ಶಾಖಾ ಸಿಬ್ಬಂದಿಗಳಾದ ಅಜಿತ್ಕುಮಾರ್, ವಿನೋದ್ರಾಜ್, ನಿತ್ಯನಿಧಿ ಸಂಗ್ರಾಹಕ ಪ್ರವೀಣ್ ದೋಂತಿಲರವರು ಸಹಕರಿಸಿದರು.
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿಯಾಗಿದ್ದು ರಾಜ್ಯ ಸರಕಾರದಿಂದ ಉನ್ನತ ವ್ಯಾಸಾಂಗಕ್ಕೆ ನೇಮಕಗೊಂಡಿರುವ ಡಾ.ಕೃಷ್ಣಾನಂದರನ್ನು ಸಂಘದ ಆಡಳಿತ ಮಂಡಳಿ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಹಾಗೂ ಸಹಕಾರ ಸಂಘದ ಸಿಬ್ಬಂದಿಗಳ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಲಹಾ ಸಮಿತಿ ಸದಸ್ಯರಾದ ರಾಧಾಕೃಷ್ಣ ಕೆರ್ನಡ್ಕರವರು ಸನ್ಮಾನಿತರನ್ನು ಪರಿಚಯಿಸಿದರು.