ಪೆರಾಬೆ: ಪೆರಾಬೆ ಗ್ರಾಮದ ನಿವಾಸಿ ಬಾಬು ಪಾಟಾಳಿ(68ವ)ರವರು ಹೃದಯಾಘಾತದಿಂದ ಜೂ.11ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತ ಬಾಬು ಪಾಟಾಳಿಯವರು ಕೃಷಿಕರಾಗಿದ್ದು ಗಾರೆ ಕೆಲಸದ ಮೇಸ್ತ್ರಿಯಾಗಿದ್ದರು. ಮೃತರು ಪತ್ನಿ ಗಿರಿಜ ಪಾಟಾಳಿ, ಪುತ್ರ ವಿನಯಕುಮಾರ್, ಪುತ್ರಿಯರಾದ ಚಂದ್ರಕಲಾ, ಶೀಲಾವತಿಯವರನ್ನು ಅಗಲಿದ್ದಾರೆ. ಮೃತರ ಮನೆಗೆ ಪೆರಾಬೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಬೇಬಿ ಸಿ ಪಾಟಾಳಿ, ಗ್ರಾ.ಪಂ.ಸದಸ್ಯೆ ಗಂಗಾರತ್ನ ವಸಂತ್, ಪ್ರಮುಖರಾದ ಮಹಾಲಿಂಗ ಪಾಟಾಳಿ ಮಂಗಳೂರು ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.