ಪುತ್ತೂರು: ಕೆಎಸ್ಆರ್ಟಿಸಿ ಬಸ್ ಬೋರ್ವೆಲ್ ಲಾರಿಗೆ ಡಿಕ್ಕಿಹೊಡೆದ ಘಟನೆ ಸಂಟ್ಯಾರ್ ತಿರುವಿನಲ್ಲಿ ಜೂ.12ರಂದು ನಡೆದಿದೆ. ಸಂಟ್ಯಾರ್ ತಿರುವಿನಲ್ಲಿ ಹೆದ್ದಾರಿ ಸಮೀಪದಲ್ಲಿ ಖಾಸಗಿ ಜಾಗದಲ್ಲಿ ಬೋರ್ವೆಲ್ ತೆಗೆಯಲು ಬಂದಿದ್ದ ಲಾರಿಯನ್ನು ಚಾಲಕ ಹಿಂದಕ್ಕೆ ತೆಗೆಯುತ್ತಿದ್ದ ವೇಳೆ ಸುಳ್ಯದಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಲಾರಿಯ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಸ್ಸಿನ ಗಾಜು ಹುಡಿಯಾಗಿದ್ದು ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.