

ಕಡಬ: ಕುಂತೂರುಪದವು ಸಂತಜಾರ್ಜ್ ಅನುದಾನಿನ ಪ್ರೌಢಶಾಲೆಯ 2019-20ನೇ ಸಾಲಿನ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ರಚನೆ ಮಾಡಲಾಯಿತು.
ಶಾಲಾ ಸರಕಾರದ ನಾಯಕನಾಗಿ ಹೇಮಂತ 10ನೇ ತರಗತಿ, ಶಾಲಾ ನಾಯಕಿಯಾಗಿ ಅಪೇಕ್ಷಾ.ಐ 10ನೇ ತರಗತಿ ಚುನಾಯಿತರಾದರು. ಉಪನಾಯಕ-ಜ್ಞಾನೇಶ್ 9ನೇ ತರಗತಿ, ಉಪನಾಯಕಿ-ದೀಪಿಕಾ 9ನೇ ತರಗತಿ, ಕ್ರೀಡಾ ಮಂತ್ರಿ-ಕೌಶಿಕ್ 10ನೇ ತರಗತಿ, ನೀರಾವರಿ ಮಂತ್ರಿ-ಆಕಾಶ್ 9ನೇ ತರಗತಿ, ಆರೋಗ್ಯ ಮಂತ್ರಿ-ಯದುಶ್ರೀ 8ನೇ ತರಗತಿ, ತೋಟಗಾರಿಕಾ ಮಂತ್ರಿ-ಮಹಮ್ಮದ್ ಆಶಿಕ್ 8ನೇ ತರಗತಿ, ವಿದ್ಯಾಮಂತ್ರಿ-ಯಶ್ವಿನಿ 8 ನೇ ತರಗತಿ, ವಿರೋದ ಪಕ್ಷದ ನಾಯಕನಾಗಿ ರಿತಿಕ್ ಮತ್ತು ಭಾಗ್ಯಶ್ರೀ 10ನೇ ತರಗತಿಯವರು ಆಯ್ಕೆಯಾದರು. ಶಾಲೆಯ ಮುಖ್ಯಗುರು ಹರಿಶ್ಚಂದ್ರ.ಕೆ.,ರವರು ಮಂತ್ರಿಮಂಡಲದ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.