ಪೆರಾಬೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಶ್ರಯದಲ್ಲಿ ನಡೆಯುವ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ಪೆರಾಬೆ ಒಕ್ಕೂಟದ ಸ್ವಸ್ತಿಕಾ ತಂಡದ ಸದಸ್ಯೆ ಅನಿತಾರವರ ಅತ್ತಿಗೆಯ ಹೆರಿಗೆಗೆ ಮಂಜೂರಾದ ಸಹಾಯಧನವನ್ನು ನಗದು ಸಹಾಯಕಿ ಚಂದ್ರಾವತಿಯವರು ಕುಂತೂರು ಕಛೇರಿಯಲ್ಲಿ ವಿತರಿಸಿದರು. ಸುವಿದಾ ಸಹಾಯಕ ಚೆನ್ನಕೇಶ್ವರ ರೈ ಗುತ್ತುಪಾಲು, ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಮಡಿವಾಳ ಉಪಸ್ಥಿತರಿದ್ದರು.