ಉಪ್ಪಿನಂಗಡಿ: ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)ಯೋಜನೆಯಡಿ ನಡೆಯುವ ಸ್ವಚ್ಛ ಮೇವ ಜಯತೇ ಆಂದೋಲನ ಜೂ.11ರಂದು ಕೊಯಿಲ ಗ್ರಾ.ಪಂ.ನಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಹೇಮಾ ಎಂ.ಶೆಟ್ಟಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ವಿಜಯ ಎಸ್.,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ನಮಿತಾರವರು ಮಾಹಿತಿ ನೀಡಿದರು. ಗ್ರಾಮಸ್ಥರಿಗೆ ಗಿಡ ವಿತರಣೆ ಮಾಡಲಾಯಿತು. ಸದಸ್ಯರುಗಳಾದ ಲಲಿತ, ಸುಜಾತ, ಕೆ.ಎ. ಸುಲೈಮಾನ್, ಬಿಪಾತುಮ, ನಝೀರ್, ಸುಧೀರ್, ಪ್ರೇಮಾ, ಲಿಂಗಪ್ಪ ಕುಂಬಾರ, ವಿನೋದರ ಮಾಳ, ಮೀನಾಕ್ಷಿ, ಸುಂದರ ನಾಯ್ಕ, ತಿಮ್ಮಪ್ಪ ಗೌಡ, ಕೊಲ ಶಾಲಾ ಮುಖ್ಯಶಿಕ್ಷಕ ಕುಶಾಲಪ್ಪ ಗೌಡ, ಗಂಡಿಬಾಗಿಲು ಶಾಲಾ ಮುಖ್ಯಶಿಕ್ಷಕ ಶೇಖರ ಅತ್ನಿ, ಸಬಳೂರು ಶಾಲಾ ಮುಖ್ಯಶಿಕ್ಷಕಿ ವಾರಿಜ ಬಿ., ವಳಕಡಮ ಶಾಲಾ ಶಿಕ್ಷಕಿ ರತ್ನಾವತಿ ಎಸ್., ಆರೋಗ್ಯ ಸಹಾಯಕಿ ಚಂಪಾ ಕೆ., ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಉಪಸ್ಥಿತರಿದ್ದರು.