HomePage_Banner
HomePage_Banner
HomePage_Banner

ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ಸಂಸತ್ತು: ನಾಯಕನಾಗಿ ದೀಕ್ಷಿತ್, ಉಪನಾಯಕಿಯಾಗಿ ಅರ್ಚನಾ ಭಾರಧ್ವಾಜ್‌ 

Puttur_Advt_NewsUnder_1
Puttur_Advt_NewsUnder_1
                  ದೀಕ್ಷಿತ್                  ಅರ್ಚನಾ ಭಾರಧ್ವಾಜ್‌ 

ಪುತ್ತೂರು: ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿಗೆಚುನಾವಣೆ ನಡೆಸಲಾಯಿತು. ಮೊದಲು ಚುನಾವಣಾ ಪ್ರಕ್ರಿಯೆಗಾಗಿ ದಿನಾಂಕಗಳನ್ನು ಘೋಷಿಸಲಾಯಿತು. ಅಭ್ಯರ್ಥಿಗಳು ಸೂಚಕರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಪರಿಶೀಲನೆಯಆನಂತರ ನಾಮಪತ್ರ ಹಿಂತೆಗೆದುಕೊಳ್ಳುವ ಅವಕಾಶವೂ ಇತ್ತು. ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಲಾಯಿತು.

ವ್ಯವಸ್ಥಿತ ಚುನಾವಣಾ ಪ್ರಚಾರದ ನಂತರ ಚುನಾವಣೆ ನಡೆಸಲಾಯಿತು. ಬೆಳಿಗ್ಗೆ ಮತದಾನ ನಡೆಸಿ ಮಧ್ಯಾಹ್ನದ ಬಳಿಕ ಮತಎಣಿಕೆ ನಡೆಯಿತು. ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿಯಿದ್ದು ಕೊನೆಗೆ ಶಾಲಾ ನಾಯಕನಾಗಿ 10ನೇ ತರಗತಿಯ ದೀಕ್ಷಿತ್ ಬಿಚುನಾಯಿತಗೊಂಡರು. ಉಪನಾಯಕಿಯಾಗಿ 10ನೇ ತರಗತಿಯ ಅರ್ಚನಾ ಭಾರಧ್ವಾಜ್‌ ಆಯ್ಕೆಯಾದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಯಾನಂದರೈ, ಮುಖ್ಯಚುನಾವಣಾಧಿಕಾರಿಯಾಗಿಕಾರ್ಯನಿರ್ವಹಿಸಿದ್ದರು.

ಸಹ ಶಿಕ್ಷಕಿ ಸುಮಂಗಲಾ.ಕೆ ರವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆ ನೆರವೇರಿತು. ಮುಖ್ಯಗುರು ಮಾಲತಿ.ಬಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಸಹ ಶಿಕ್ಷಕಿಯರಾದ ಪುಷ್ಪಾವತಿ.ಎಸ್, ಪ್ರವೀಣಕುಮಾರಿ, ಶೋಭಾ.ಬಿ, ಭುವನೇಶ್ವರಿ.ಎಂ, ರಾಧಾಕೃಷ್ಣ ಆರ್‌ರವರು ಮತಗಟ್ಟೆಯ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.