ಕಡಬ: ಕುಟ್ರುಪಾಡಿ ಗ್ರಾಮ ಪಂಚಾಯತಿ ವತಿಯಿಂದ ನಡೆಯುತ್ತಿರುವ ಸ್ವಚ್ಚಮೇವ ಜಯತೆ ಆಂದೋಲನಾ ಕಾರ್ಯಕ್ರಮಕ್ಕೆ ಜೂ.11ರಂದು ಚಾಲನೆ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ.ಕೆ.ಗೋಗಟೆ ಚಾಲನೆ ನೀಡಿದರು.
ಬೇಸ್ ಲೈನ್ ಸರ್ವೆ 2012ರ ಶೌಚಾಲಯ ರಹಿತ ಕುಟುಂಬಗಳಿಗೆ ಕಾರ್ಯಾದೇಶ ವಿತರಿಸಲಾಯಿತು. ಕುಟ್ರುಪಾಡಿ ಶಾಲಾ ಮುಖ್ಯ ಗುರು ಮಾಯಿಲಪ್ಪ.ಜಿ ಪರಿಸರದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯದ ಬಗ್ಗೆ ಕಿರಿಯ ಆರೋಗ್ಯ ಸಹಾಯಕಿ ಆನ್ಸಿ ತೋಮಸ್ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೊಡ್ರಿಗಸ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭ ಸಾರ್ವಜನಿಕ ಶೌಚಾಲಯಕ್ಕೆ ತಾಲೂಕು ಪಂಚಾಯಿತಿ ಸದಸ್ಯೆ ಗಣೇಶ್ ಕೈಕುರೆ ಗುದ್ದಲಿ ಪೂಜೆ ನೆರವೇರಿಸಿದರು. ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕಚೇರಿ ಆವರಣದಲ್ಲಿ, ಶಾಲಾ ಆವರಣಗಳಲ್ಲಿ ಸಸಿಗಳನ್ನು ನೆಡಲಾಯಿತು. ಮತ್ತು ಗ್ರಾಮಸ್ಥರಿಗೆ ಸಸಿ ವಿತರಣೆ, ಹೊಸ್ಮಠ ಪೇಟೆಯಲ್ಲಿ ಸಾರ್ವಜನಿಕ ಸ್ವಚ್ಚತಾ ಜಾಥಾ ನಡೆಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆನಂದ ಪೂಜಾರಿ, ಸದಸ್ಯರಾದ ಶಿವಪ್ರಸಾದ್ ಪಿ.ವಿ, ಲಿಂಗಪ್ಪ ಗೌಡ, ಯಶೋಧ, ಜಾನಕಿ ಪಟ್ಟೆ, ಜಾನಕಿ ಕುಂಟೋಡಿ, ಕುಸುಮಾವತಿ ಮೊದಲಾದವರು ಉಪಸ್ಥಿತರಿದ್ದರು.