ಸವಣೂರು: ಇಲ್ಲಿನ ಶಾಂತಿಮೊಗರು ಸೇತುವೆಯ ಬಳಿ ಗೆಳೆಯರೊಂದಿಗೆ ಸ್ನಾನಕ್ಕೆಂದು ಇಳಿದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಜೂ.12ರಂದು ಸಂಜೆ ನಡೆದಿದೆ. ಈತನು ಸ್ನಾನಕ್ಕೆಂದು ಇಳಿದು ಬಳಿಕ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದ. ಬಳಿಕ ಸ್ಥಳೀಯರ ನೆರವಿನಿಂದ ಹುಡುಕಾಟ ನಡೆಸಿದಾಗ ಮುಳುಗಿದ ಸ್ಥಳದಲ್ಲಿಯೇ ಬಾಲಕನ ಶವ ಪತ್ತೆಯಾಗಿದೆ. ಪರಣೆ ಹಮೀದ್ ಎಂಬವರ ಪುತ್ರ ಅಶ್ಫಾಕ್ ಮೃತ ಬಾಲಕನಾಗಿದ್ದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾನೆ. ಕಡಬ ಹಾಗೂ ಬೆಳ್ಳಾರೆ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.