HomePage_Banner
HomePage_Banner

34 ನೆಕ್ಕಿಲಾಡಿ: ವಿದ್ಯುತ್ ಸ್ಪರ್ಶಿಸಿ ಪವರ್ ಮೆನ್ ಮಿಟ್ಯಾ ನಾಯಕ್ ಮೃತ್ಯು


ಪುತ್ತೂರು: ವಿದ್ಯುತ್ ದುರಸ್ಥಿ ಮಾಡಿದ ಬಳಿಕ ವಿದ್ಯುತ್ ಪೂರೈಕೆ ಮಾಡಲು ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ಕೊಡುತ್ತಿದ್ದ ಪವರ್ ಮೆನ್ ಒಬ್ಬರಿಗೆ ಆಕಸ್ಮಿಕವಾಗಿ ವಿದ್ಯುತ್ ಹರಿದು ಮೃತಪಟ್ಟ ಘಟನೆ ಜೂ.12 ರಂದು ಉಪ್ಪಿನಂಗಡಿ ಸಮೀಪದ 34 ನೆಕ್ಕಿಲಾಡಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಮೂಲತಃ ದಾವಣಗೆರೆ ನಿವಾಸಿ ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಪವರ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿರುವ ಮಿಟ್ಯಾ ನಾಯಕ್(35ವ) ರವರು ಮೃತ ಪಟ್ಟವರು. ಅವರು ಸವಣೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ಯವ್ಯ ಇರುವ ಅವರು ಉಪ್ಪಿನಂಗಡಿ ಮೆಸ್ಕಾಂ ಶಾಖೆಗೆ ನಿತ್ಯ ಹೋಗಿ ಬರುತ್ತಿದ್ದರು. ಜೂ. 12 ರಂದು ಮೈನ್ ಲೈನ್ ದುರಸ್ಥಿಯ ಹಿನ್ನಲೆಯಲ್ಲಿ ಬೇರಿಕೆಯ ಪೊಲೀಸ್ ವಸತಿ ಗೃಹದ ಬಳಿ ಲೈನ್ ಆಫ್ ಮಾಡಲಾಗಿತ್ತು. ದುರಸ್ಥಿಯ ಬಳಿಕ ಲೈನ್ ಚಾರ್ಜ್ ಮಾಡಲು ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ಕೊಡುತ್ತಿದ್ದಂತೆ ಪವರ್ ಮೆನ್ ಮಿಟ್ಯಾ ನಾಯಕ್ ಅವರ ಮೇಲೆ ವಿದ್ಯುತ್ ಹರಿದು ಅಲ್ಲೆ ಕುಸಿದು ಅಸ್ವಸ್ತಗೊಂಡರು. ಇದೇ ಸಂದರ್ಭದಲ್ಲಿ ಮಿಟ್ಯಾ ನಾಯಕ್ ಜೊತೆ ಇದ್ದ ಸಹದ್ಯೋಗಿ ಸಾಬಣ್ಣ ಎಂಬವರು ಬೊಬ್ಬೆಹೊಡೆದಾಗ ಸ್ಥಳೀಯರು ಸೇರಿಕೊಂಡು ಅಸ್ವಸ್ಥಗೊಂಡ ಮಿಟ್ಯಾ ನಾಯಕ್ ಅವರನ್ನು ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಗೆ 108 ಆ್ಯಂಬುಲೆನ್ಸ್ ಮೂಲಕ‌ ಕರೆತಂದರು.  ಗಂಭೀರ ಗಾಯಗೊಂಡ ಪವರ್ ಮೆನ್ ಮಿಟ್ಯಾ ನಾಯಕ್ ಆಗಲೇ ಮೃತಪಟ್ಟಿದ್ದರು. ಮೃತರು ಪತ್ನಿ,‌ ಪುತ್ರಿಯನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.