ಸುದಾನ ಶಾಲೆಯ  ಸ್ತುತಿ ಎಂ.ಎಸ್, ಸಂಧ್ಯಾ ಪ್ರಭು ಅಂತರಾಷ್ಟ್ರೀಯ ಮಟ್ಟಕ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

                                                                             ಸ್ತುತಿ ಎಂ.ಎಸ್

 

                                                                              ಸಂಧ್ಯಾ ಪ್ರಭು

ಪುತ್ತೂರು: ಜೂ.17 ರಿಂದ 21ರವರೆಗೆ Oswego New Yark USA ಯಲ್ಲಿ ಜರಗಲಿರುವ ಅಂತರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್ 2019ರಲ್ಲಿ ಭಾಗವಹಿಸಲು ಸುದಾನ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರಾದ ಸ್ತುತಿ ಎಂ.ಎಸ್. (ವಿವೇಕಾನಂದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಕೃಷ್ಣಗಣರಾಜ ಭಟ್ ಹಾಗೂ ಸೌಮ್ಯ ಭಟ್ ರವರ ಪುತ್ರಿ) ಹಾಗೂ ಸಂಧ್ಯಾ ಪ್ರಭು (ಪ್ರಭು ಸ್ಟೀಲ್ ಮಾಲಕ ರಮೇಶ್ ಪ್ರಭು ಹಾಗೂ ರಜನಿ ಪ್ರಭುರವರ ಪುತ್ರಿ) ಇವರ ತಂಡ ಆಯ್ಕೆಗೊಂಡಿದೆ.

ಈ ವಿದ್ಯಾರ್ಥಿನಿಯರ ಸಂಶೋಧನೆ ‘A study on an aqueous solution of Careya arborea on wood termites’ INSEFನ ವಿಭಾಗೀಯ ಹಾಗೂ ನವಂಬರ್ 2019ರಲ್ಲಿ ರಾಜಕೋಟ್‌ನಲ್ಲಿ ಜರಗಿದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಿಟ್ಟಿಸಿ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲಿದೆ. ಈ ದ್ರಾವಣವು ಮನೆಯ ಒಳಗೆ ಹಾಗೂ ಹೊರಾಂಗಣಗಳಲ್ಲಿ ಕಾಣಿಸುವ ಎಲ್ಲಾ ತರಹದ ಗೆದ್ದಲು ಹುಳುಗಳ ನಿರ್ಮೂಲನೆಗೆ ರಾಮಬಾಣವಾಗಿದ್ದು ಯಾವುದೇ ಕೃತಕ ರಾಸಾಯನಿಕಗಳಿಲ್ಲದೇ ಇರುವುದರಿಂದ ಪರಿಸರಕ್ಕೆ, ಆರೋಗ್ಯಕ್ಕೆ ಯಾವುದೇ ಹಾನಿ ಯುಂಟು ಮಾಡುವುದಿಲ್ಲ.

ಈ ವಿದ್ಯಾರ್ಥಿಗಳ ಪ್ರತಿಭೆ, ಪರಿಶ್ರಮವು US science forum ವತಿಯಿಂದ ಗುರುತಿಸಲ್ಪಟ್ಟು IRIS National level  ಸ್ಪರ್ಧೆಯಲ್ಲಿ 500 US Dollars ಬಹುಮಾನವು ಈ ವಿದ್ಯಾರ್ಥಿಗಳಿಗೆ ಲಭಿಸಿರುತ್ತದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.