HomePage_Banner
HomePage_Banner
HomePage_Banner

ಜೂ.30ರ ತನಕ ಬಸ್ ಪಾಸ್‌ವಿಸ್ತರಣೆ ಮಾಡಿದರೂ ವಿದ್ಯಾರ್ಥಿಗಳಿಂದ ಟಿಕೆಟ್ ಮಾಡಿಸಿಕೊಂಡ ನಿರ್ವಾಹಕರು !

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ೨೦೧೮-೧೯ನೇ ಸಾಲಿನಲ್ಲಿ ವಿತರಿಸಲಾಗಿರುವ ಬಸ್ ಪಾಸ್‌ನ ಅವಧಿಯನ್ನು ಜೂ.೩೦ರ ತನಕ ವಿಸ್ತರಿಸಲಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ. ಘಟಕ ಸಾರ್ವಜನಿಕ ಪ್ರಕಟಣೆ ನೀಡಿದರೂ ಕೆಲವು ನಿರ್ವಾಹಕರು ಬಸ್‌ಪಾಸ್ ಅವಧಿ ಮುಗಿದಿದೆ ಎಂದು ಹೇಳಿ ವಿದ್ಯಾರ್ಥಿಗಳಿಂದ ಟಿಕೆಟ್ ಮಾಡಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.

೨೦೧೯-೨೦ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳು ಪ್ರಾರಂಭಗೊಂಡಿದ್ದು ಬಸ್‌ಪಾಸ್ ವಿತರಣೆಯಲ್ಲಿ ತಾಂತ್ರಿಕ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದಂತೆ ೨೦೧೮-೧೯ನೇ ಸಾಲಿನಲ್ಲಿ ವಿತರಿಸಲಾಗಿರುವ ಬಸ್‌ಪಾಸ್‌ಗಳನ್ನೇ ಮಾನ್ಯ ಮಾಡಲಾಗುತ್ತಿದ್ದು ಅದೇ ಪಾಸನ್ನು ತೋರಿಸಿ ವಿದ್ಯಾರ್ಥಿಗಳು ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಅಲ್ಲದೆ ೨೦೧೮-೧೯ನೇ ಸಾಲಿನ ವಿದ್ಯಾರ್ಥಿ ಪಾಸ್‌ನ ಜೊತೆಗೆ ಪ್ರಸಕ್ತ ಸಾಲಿನ ಬೋಧನಾ ಶುಲ್ಕ ರಶೀದಿ ಅಥವಾ ಶಾಲಾ/ಕಾಲೇಜುಗಳ ಗುರುತಿನ ಚೀಟಿ ತೋರಿಸಿ ಪಾಸ್‌ನಲ್ಲಿ ನಮೂದಿಸಲಾಗಿರುವ ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ನೀಡಿತ್ತು. ಅದರಂತೆ ವಿದ್ಯಾರ್ಥಿಗಳು ಆ ದಾಖಲೆಗಳನ್ನು ತೋರಿಸಿದರೂ ಕೆಲವೊಂದು ಬಸ್‌ನ ನಿರ್ವಾಹಕರು ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಗಣಿಸದೆ ನೇರ ಟಿಕೇಟ್ ಪಡೆಯುತ್ತಿದ್ದಾರೆ. ಹಣ ಇಲ್ಲದೆ ಬಂದ ವಿದ್ಯಾರ್ಥಿಗಳು ಬಸ್‌ನಿಂದಲೇ ಅರ್ಧದಲ್ಲೇ ಇಳಿಯುವ ಪರಿಸ್ಥಿತಿ ಎದುರಾಗಿದೆ ಎಂಬ ದೂರು ವ್ಯಕ್ತವಾಗಿದೆ. ಈ ಕುರಿತು ಪುತ್ತೂರು ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಸಂಚಾಲಕರು ಕೆ.ಎಸ್.ಆರ್.ಟಿ.ಸಿ. ಸಂಚಾರ ನಿಯಂತ್ರಕರನ್ನು ಸಂಪರ್ಕಿಸಿದಾಗ ನಮ್ಮ ಮಾತನ್ನು ನಿರ್ವಾಹಕರು ಕೇಳುತ್ತಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಜೂ.17ಕ್ಕೆ ಬಸ್ ಪಾಸ್ ವಿತರಣೆ
ವಿದ್ಯಾರ್ಥಿಗಳಿಗೆ ಸದ್ಯ ಹಳೆಯ ಪಾಸ್ ಅಥವಾ ಶಾಲಾ/ ಕಾಲೇಜುಗಳ ಗುರುತಿನ ಚೀಟಿ ಮತ್ತು ದಾಖಲೆಯ ರಶೀದಿಯನ್ನು ತೋರಿಸಿ ಪ್ರಯಾಣಿಸಲು ತಿಳಿಸಿದೆ. ಈ ಕುರಿತು ನಿರ್ವಾಹಕರಿಗೂ ಮಾಹಿತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಟಿಕೇಟ್ ಪಡೆಯುವ ಸಂದರ್ಭ ಬರುವುದಿಲ್ಲ. ಸರಿಯಾದ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಟಿಕೆಟ್ ಪಡೆದಿರಬಹುದು. ಜೂ.೧೭ಕ್ಕೆ ಹೊಸ ಬಸ್ ಪಾಸ್ ವಿತರಣೆ ಆಗಲಿದೆ. ಸಮಸ್ಯೆ ಪರಿಹಾರ ಆಗಲಿದೆ ಎಂದು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಅಧಿಕಾರಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.