ಕಡಬ : ನೂತನ ಕಡಬ ತಾಲೂಕಾಗಿ ಅನುಷ್ಠಾನ ಕಾರ್ಯ ಪ್ರಗತಿಯಲ್ಲಿ ಇರುವಂತೆ ಕಡಬ ತಾಲೂಕು ಪಂಚಾಯತ್ ರಚನೆಗೆ ಸರಕಾರ ಮುಂದಾಗಿದೆ. ರಾಜ್ಯದಾದ್ಯಂತ ನೂತನವಾಗಿ ರಚನೆಯಾಗಿರುವ 50 ಹೊಸ ತಾಲೂಕುಗಳ ಪೈಕಿ ಕಡಬ ಪೂರ್ಣ ಪ್ರಮಾಣದ ತಾಲೂಕು ಆಗಿ ಕಾರ್ಯಾಚರಿಸುತ್ತಿದ್ದು ಕಡಬ ತಾಲೂಕು ಪಂಚಾಯತ್ ಕೂಡ ಅನುಷ್ಠಾನಗೊಂಡು ಕಾರ್ಯರಂಭಗೊಳ್ಳಲಿದೆ. ಪುತ್ತೂರು ತಾಲೂಕು ವ್ಯಾಪ್ತಿಯ 11 ಹಾಗೂ ಸುಳ್ಯ ತಾಲೂಕಿನ 2 ಕ್ಷೇತ್ರ ಸೇರಿದಂತೆ 13 ಕ್ಷೇತ್ರಗಳನ್ನೊಳಗೊಂಡ ನೂತನ ಹೊಸ ತಾಲೂಕು ಪಂಚಾಯತ್ ಕಾರ್ಯರಂಭಿಸಲಿದೆ.