ಸರ್ಕಾರಿ ಪ್ರೌಢಶಾಲೆ ನಿಡ್ಲೆಯಲ್ಲಿ ಮಕ್ಕಳ ದಿನಾಚರಣೆ

0


ನಿಡ್ಲೆ : ಸರ್ಕಾರಿ ಪ್ರೌಢಶಾಲೆ ನಿಡ್ಲೆ ಇಲ್ಲಿಯ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ನಿಡ್ಲೆ ಗ್ರಾಮದ ನೂಜಿಲ ಲಕ್ಷ್ಮಣ ಗೌಡ ಇವರ ತೋಟದಲ್ಲಿ ವಿವಿಧ ಮನೋರಂಜನೆ ಮತ್ತು ಆಟೋಟಗಳ ಮೂಲಕ ಮಕ್ಕಳ ದಿನಾಚರಣೆಯನ್ನು ಬಹಳ ಸಂತೋಷದಿಂದ ಆಚರಿಸಿದರು.

ನೂಜಿಲ ಮನೆಯವರು ವಿದ್ಯಾರ್ಥಿಗಳಿಗೆ ಶುಚಿ ರುಚಿಯಾದ ಉಪಹಾರ ಮತ್ತು ಮಧ್ಯಾಹ್ನದ ಭೋಜನದ ವಿಶೇಷ ವ್ಯವಸ್ಥೆ ಮಾಡಿದ್ದರು. ಮಕ್ಕಳ ಮನರಂಜನೆಗಾಗಿ ತೋಟದಲ್ಲಿ ವ್ಯವಸ್ಥೆ ಮಾಡಿದ್ದರು. ಅವರ ಕುಟುಂಬ ಸದಸ್ಯರೆಲ್ಲರ ಆತ್ಮೀಯತೆಯ ಈ ಆತಿಥ್ಯ ಬಹಳ ಆಪ್ಯಾಯಮಾನ ವಾಗಿತ್ತು . ಒಟ್ಟಿನಲ್ಲಿ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಿ ಸಂತೋಷವಾಗಿ ನಡೆಯಿತು.

LEAVE A REPLY

Please enter your comment!
Please enter your name here