ಪಟ್ರಮೆ ಗುರುವ ಸಂಶಯಾಸ್ಪದ ಸಾವು, ಠಾಣೆಗೆ ದೂರು

0

ಪಟ್ರಮೆ: ಪಟ್ರಮೆ ಗ್ರಾಮದ ಪಟ್ಟೂರು ಸಮೀಪದ ಗುರುವ ಮುಗೇರ (66) ನ.14 ರಂದು ಮೃತ ಪಟ್ಟಿದ್ದಾರೆ. ಇದು ಸಂಶಯಾಸ್ಪದ ಸಾವು ಎಂದು ಮೃತರ ಅಣ್ಣನ ಮಗ ಕಿರಣ್ ಎಂಬವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಗುರುವ ಮುಗೇರರಿಗೆ ಇಬ್ಬರು ಪುತ್ರರಿದ್ದು, ಹಿರಿಯ ಪುತ್ರ ದಶಕದ ಹಿಂದೆ ಇಲಿ ಜ್ವರದಿಂದ ಮೃತಪಟ್ಟಿದ್ದು, ಹಿರಿಯ ಸೊಸೆ ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದರು. ಕಿರಿಯ ಪುತ್ರ ಕಳೆದ ವಾರ ಹಾವು ಕಚ್ಚಿ ಮೃತಪಟ್ಟಿದ್ದು ಗುರುವ ಮುಗೇರರ ಪತ್ನಿಯೂ ಮೃತ ಪಟ್ಟಿದ್ದು ಮನೆಯಲ್ಲಿ ಗುರುವ ಹಾಗೂ ಅವರ ಪುತ್ರಿ ಜಾನಕಿ ವಾಸಿಸುತ್ತಿದ್ದರು. ಮಗಳು ಜಾನಕಿ ದೊಡ್ಡಪ್ಪನ ಮಗ ಕಿರಣ್ ಅವರಿಗೆ ತಂದೆಯ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಆಗಮಿಸಿದ ಕಿರಣ್, ಗುರುವ ಮುಗೇರರ ಮನೆಗೆ ಬಂದಾಗ ಅವರ ತಲೆಯಲ್ಲಿ ರಕ್ತ ಸುರಿಯುತ್ತಿತ್ತು ಹಾಗೂ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಿರಣ್ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸೂಕ್ತ ತನಿಖೆ ನಡೆಸುವಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here