ಬಂಗಾಡಿ‌ ಸರಕಾರಿ ಶಾಲೆಯ ‘ಮಕ್ಕಳ ದಿನಾಚರಣೆಯಲ್ಲಿ’ ಭಾಗಿಯಾದ ಲಯನ್ಸ್ ಜಿಲ್ಲಾ ರಾಜ್ಯಪಾಲರು

0

ಬಂಗಾಡಿ :  ಲಯನ್ಸ್ ಜಿಲ್ಲಾ ರಾಜ್ಯಪಾಲ, ಸಕಲೇಶಪುರ ಸುರಭಿ ಗ್ರೂಪ್ ಆಫ್ ಹೊಟೇಲ್ ಮಾಲಕ ಸಂಜೀತ್ ಶೆಟ್ಟಿ ಅವರು ನ.14 ರಂದು ಬಂಗಾಡಿ ಸರಕಾರಿ ಪ್ರಾಥಮಿಕ ಶಾಲೆಗೆ ದಿಢೀರ್‌ ಭೇಟಿ ನೀಡಿ ಮಕ್ಕಳ ದಿನಾಚರಣೆಯಲ್ಲಿ ಭಾಗಿಯಾದರು.

ಶತಮಾನೋತ್ತರ ದಶಮಾನೋತ್ಸವ ವರ್ಷಕ್ಕೆ ಕಾಲಿಟ್ಟು ಸದ್ಯದಲ್ಲೇ ಸಂಭ್ರಮಾಚರಣೆಗೆ ಅಣಿಯಾಗಿರುವ ಶಾಲೆ, ಅದರ‌ ಜೊತೆಗೆ ಸದ್ರಿ‌ ಶಾಲೆಯ ಶಿಕ್ಷಕರಾಗಿದ್ದು ಲಯನ್ಸ್ ಕ್ಲಬ್ ಬೆಳ್ತಂಗಡಿ ಸದಸ್ಯರಾಗಿ ಪ್ರಸ್ತುತ ವರ್ಷ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಅಮಿತಾನಂದ ಹೆಗ್ಡೆ ಅವರು ಇರುವ ಶಾಲೆ ಎಂಬ ನೆಲೆಯಲ್ಲಿ ರಾಜ್ಯಪಾಲರು ಈ ಭೇಟಿ ಇಟ್ಟುಕೊಂಡಿದ್ದರು.

ಮುಖ್ಯ ಶಿಕ್ಷಕ ಸುಭಾಶ್ ಜಾದವ್, ಸಹಿತ ಎಲ್ಲಾ ಶಿಕ್ಷಕರು ಹಾಗೂ ಮಕ್ಕಳು ವಿಶೇಷ ರೀತಿಯಲ್ಲಿ ರಾಜ್ಯಪಾಲರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜ್ಯಪಾಲರು ಮಕ್ಕಳಿಗೆ‌ ಬಹುಮಾನಗಳನ್ನು ವಿತರಿಸಿದರು. ಶಾಲಾ ಎಸ್‌ಡಿಎಂಸಿ ಸದಸ್ಯರು, ಲಯನ್ಸ್ ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ, ಪ್ರಾಂತೀಯ ಸಮ್ಮೇಳನ‌ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ, ಕಾರ್ಯಾಧ್ಯಕ್ಷ ಹೇಮಂತ ರಾವ್ ಯರ್ಡೂರು, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಘಟಕದ ಕಾರ್ಯದರ್ಶಿ ತುಕಾರಾಮ‌ ಬಿ, ಸದಸ್ಯರಾದ ರಘುರಾಮ ಶೆಟ್ಟಿ, ಮೇದಿನಿ ಡಿ ಗೌಡ, ಜಯಂತ ಶೆಟ್ಟಿ ಕುಂಟಿನಿ, ಅಶ್ರಫ್ ಆಲಿಕುಂಞಿ, ಧತ್ತಾತ್ರೇಯ ಜಿ, ಶುಭಾಷಿಣಿ, ಸುರೇಂದ್ರ ಕುಮಾರ್, ಜೇಮ್ಸ್ ಮೆಂಡ, ಸ್ಟೇನಿ ಮಿರಾಂದ, ಮೆಲ್ವಿನ್ ಸಲ್ಡಾನಾ, ಓಸ್ವಾಲ್ಡ್ ಡಿಸೋಜಾ, ರಾಮಕೃಷ್ಣ ಗೌಡ, ಜೆಫ್ರಿಯನ್ ತಾವ್ರೂ, ರೋಶನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here