HomePage_Banner
HomePage_Banner
HomePage_Banner

ಸುತ್ತಮುತ್ತಲೂ ನೀರು.. ನಡುವೆ ವ್ಯಾಪಾರ ಜೋರು…!

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸವಣೂರಿನಲ್ಲಿ ನಡೆದ ವಾರದ ಸಂತೆಗೆ ಹೋದವರಿಗೆ ವಿಶಿಷ್ಟ ಶಾಪಿಂಗ್ ಅನುಭವ. ಕಳೆದ ಕೆಲವು ದಿನಗಳಿಂದ ಜೋರಾಗಿ ಸುರಿಯುತ್ತಿರುವ ಮುಂಗಾರು ಮಳೆಗೆ ಮೈದಾನದ ತುಂಬಾ ನೀರು ತುಂಬಿ ಕೃತಕ ನೆರೆ ಉಂಟಾಯಿತು.ಸಂತೆ ಮೈದಾನದ ನಡುನಡುವೆ ಖಾಲಿ ಜಾಗದಲ್ಲಿ ಮಾತ್ರ ವ್ಯಾಪಾರಿ ಮಳಿಗೆಗಳಿದ್ದ ಕಾರಣ ಗ್ರಾಹಕರು ಒಂದು ಮಳಿಗೆಯಿಂದ ಇನ್ನೊಂದು ಮಳಿಗೆಗೆ ಹೋಗಬೇಕಾದರೆ ನೀರು ದಾಟಬೇಕಾದ ಅನಿವಾರ್ಯತೆ ಎದುರಾಯಿತು.

ಕಳೆದ ಫೆಬ್ರವರಿ ತಿಂಗಳಲ್ಲಿ ಸವಣೂರಿನ ಬಸದಿ ವಠಾರದಲ್ಲಿ ಆರಂಭವಾದ ಸವಣೂರಿನ ವಾರದ ಸಂತೆ ವಾರದಿಂದ ವಾರಕ್ಕೆ ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿದೆ.ಪ್ರತೀ ವಾರವೂ ವ್ಯಾಪಾರಿಗಳ ಸಂಖ್ಯೆ ಅಧಿಕವಾಗುತ್ತಿದೆ.ಆದರೆ ಈ ಬಾರಿ ಸುರಿದ ಮಳೆಯ ಪರಿಣಾಮ ಸಂತೆ ಮೈದಾನದ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ ಹಾಗೂ ನೀರು ಹರಿದು ಹೋಗಲು ಸೂಕ್ತ ಚರಂಡಿಯ ವ್ಯವಸ್ಥೆ ಕಲ್ಪಿಸದ ಕಾರಣ ಇಡೀ ಮೈದಾನ ಕೊಳದಂತಾಗಿ ಗ್ರಾಹಕರು ಮತ್ತು ವ್ಯಾಪಾರಿಗಳು ಸಂಕಟ ಪಡಬೇಕಾಯಿತು.ಆದರೂ ಗ್ರಾಹಕರು ಅತೀವ ಉತ್ಸಾಹದಿಂದ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡದ್ದರಿಂದ ವ್ಯಾಪಾರಿಗಳು ತುಸು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಸಂತೆಯಲ್ಲಿ ಭಾಗವಹಿಸಿದ ಗ್ರಾಹಕರು ಈ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದರೆ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಹೆಚ್ಚಿನ ಅನುಕೂಲವಾಗುತ್ತಿತ್ತು, ಈ ಕುರಿತು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡಿದ್ದರೆ ಒಳ್ಳೆಯದಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದರು.

ಈ ಕುರಿತು ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಿ ಕೆ ಯವರನ್ನು ಸುದ್ದಿ ಪ್ರತಿನಿಧಿ ಸಂಪರ್ಕಿಸಿದಾಗ ” ಇಂದು ಮಳೆ ಸ್ವಲ್ಪ ಜೋರಾಗಿ ಸುರಿಯುತ್ತಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ.ಮೈದಾನವನ್ನು ಪರಿಶೀಲಿಸಿ, ಮುಂದಿನ ವಾರದ ಸಂತೆಗೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಗ್ರಾಹಕರು ಮತ್ತು ವ್ಯಾಪಾರಿಗಳು ಸೇರಿ ನೀರು ಹರಿದು ಹೋಗಲು ತಾತ್ಕಾಲಿಕ ಚರಂಡಿ ನಿರ್ಮಿಸಿದರು
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.