Home_Page_Advt
Home_Page_Advt
Home_Page_Advt

ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆ: ಮರಳು ಸಮಸ್ಯೆ ಬಗೆಹರಿಸುವಂತೆ ಡಿಸಿ, ಗಣಿ ಇಲಾಖೆಗೆ ಮನವಿಗೆ ನಿರ್ಣಯ

Puttur_Advt_NewsUnder_1
Puttur_Advt_NewsUnder_1


ಪೆರಾಬೆ: ಮರಳಿನ ಸಮಸ್ಯೆಯಿಂದ ಕಾಮಗಾರಿಗಳ ಅನುಷ್ಠಾನಕ್ಕೆ ಹಾಗೂ ವಸತಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಫಲಾನುಭವಿಗಳಿಗೆ ತೊಂದರೆಯಾಗಿರುವುದರಿಂದ ಮರಳು ಸಮಸ್ಯೆ ಶೀಘ್ರ ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಹಾಗೂ ಗಣಿ ಇಲಾಖೆಗೆ ಬರೆಯಲು ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಜೂ.4ರಂದು ಅಧ್ಯಕ್ಷೆ ಸುಗುಣರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಉಪಾಧ್ಯಕ್ಷ ಸುರುಳಿ ಜನಾರ್ದನ ಶೆಟ್ಟಿಯವರು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮರಳು ದೊರೆಯುತ್ತಿಲ್ಲ. ಇದರಿಂದಾಗಿ ಗ್ರಾ.ಪಂ.ನ ವಿವಿಧ ಯೋಜನೆಗಳ ಕಾಮಗಾರಿಗಳ ಅನುಷ್ಠಾನ ಮತ್ತು ವಸತಿ ಯೋಜನೆಯ ಕಾಮಗಾರಿಗೆ ತೊಂದರೆಯಾಗಿದೆ. ವಸತಿ ಯೋಜನೆಯಡಿ ಮನೆ ನಿರ್ಮಾಣ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಫಲಾನುಭವಿಗಳಿಗೆ ಆಗುತ್ತಿಲ್ಲ. ಇದರಿಂದ ತೀವ್ರ ತೊಂದರೆಯಾಗಿದೆ. ಇದಕ್ಕೆ ಶೀಘ್ರ ಪರಿಹಾರ ನೀಡುವಂತೆ ದ.ಕ.ಜಿಲ್ಲಾಧಿಕಾರಿಗಳಿಗೆ ಹಾಗೂ ಗಣಿಇಲಾಖೆಗೆ ಪತ್ರ ಬರೆಯಬೇಕೆಂದು ಆಗ್ರಹಿಸಿದರು. ಇದಕ್ಕೆ ಇತರೇ ಸದಸ್ಯರು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಮರಳು ಸಮಸ್ಯೆ ಶೀಘ್ರ ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಹಾಗೂ ಗಣಿ ಇಲಾಖೆಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ಮನೆತೆರಿಗೆ ಹಾಗೂ ನೀರಿನ ಶುಲ್ಕ ಪಾವತಿಸಲು ಬಾಕಿ ಇರುವ ಫಲಾನುಭವಿಗಳಿಗೆ ನೋಟಿಸು ಜಾರಿಮಾಡುವುದು. ತಪ್ಪಿದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು. ವ್ಯಾಪಾರ ಪರವಾನಿಗೆ ಪಡೆಯದೆ ವ್ಯಾಪಾರ ಮಾಡುತ್ತಿರುವ ಅಂಗಡಿ ಮಾಲೀಕರಿಗೆ ನೋಟಿಸು ಜಾರಿಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ನರೇಗಾ ಯೋಜನೆಯಡಿ ಪೆರಾಬೆ ಗ್ರಾ.ಪಂ.ವ್ಯಾಪ್ತಿಯ ಚಾಮೆತ್ತಡ್ಕ ರಸ್ತೆ, ಮಾವಿನ ಕಟ್ಟೆ (ದೇವಿ ನಗರ) ರಸ್ತೆ, ಇಡಾಳ ಶಾಲಾ ರಸ್ತೆ ಮತ್ತು ಪೆರಾಬೆ ಮತ್ತು ಜನತಾ ಶಾಲನಿ ರಸ್ತೆಯನ್ನು ಈ ಆರ್ಥಿಕ ವರ್ಷದಲ್ಲಿ ಕಾಂಕ್ರಿಟೀಕರಣಕ್ಕೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಸದಸ್ಯರುಗಳಾದ ಚಂದ್ರಶೇಖರ ರೈ ಅಗತ್ತಾಡಿ, ಗಂಗಾರತ್ನ ವಸಂತ್, ಬೇಬಿ ಸಿ ಪಾಟಾಳಿ, ಗೀತಾ, ಮಧುರಾ, ವನಜ ಹರಿಣಾಕ್ಷೀ, ಬಾಬು ಗೌಡ ಕೆ.ಎಸ್, ಭುವನೇಶ್ವರ.ಕೆ, ದಿನೇಶ್ ಅಗತ್ತಾಡಿ, ಚೆನ್ನಪ್ಪ ಗೌಡ ಕೆ.ಎಸ್, ಅಮೃತಾ ಜೆ.,ರವರು ಚರ್ಚೆಯಲ್ಲಿ ಭಾಗವಹಿಸಿದರು. ಪ್ರಭಾರ ಪಿಡಿಒ ಲಲಿತಾ ಜಿ.ಡಿ., ಸ್ವಾಗತಿಸಿ, ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿ, ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.