ವೇಣೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ, ವೇಣೂರು ಇಲ್ಲಿನ ಸ್ಥಾಪಕ ಪ್ರಾಚಾರ್ಯ, ಪ್ರಸಕ್ತ ನೇಮಕಾತಿ ಅಧಿಕಾರಿ, ನಿವೃತ್ತ ಯೋಧ ಎಂ.ಆರ್.ಜೈನ್ ರವರಿಗೆ ಶೃದ್ಧಾಂಜಲಿ ಕಾರ್ಯಕ್ರಮ ಐಟಿಐ ಸಭಾಂಗಣದಲ್ಲಿ ನಡೆತು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಉದ್ಯ” ಕೆ. ಭಾಸ್ಕರ್ ಪೈ, ಐಟಿಐ ನಿವೃತ್ತ ಪ್ರಾಚಾರ್ಯ ಸದಾನಂದ ಪೂಜಾರಿ, ಹಳೆ “ದ್ಯಾರ್ಥಿ ಸಂಘದ ಅಧ್ಯಕ್ಷರಾದ ಉದ್ಯ” ಜಿನರಾಜ್ ಜೈನ್, ಕಿರಿಯ ತರಬೇತಿ ಅಧಿಕಾರಿ ಜಾಕೋಬ್ ಟಿ.”. , ದಯಾನಂದ ಭಂಡಾರಿ ಹಾಗೂ ಹಾಗೂ ಹಳೆ “ದ್ಯಾರ್ಥಿ ಗುರುಎಲೆಕ್ಟ್ರಾನಿಕ್ಸ್ ಮಾಲಕ ಶ್ರೀಕಾಂತ್ ಉಡುಪ ದಿವಂಗತರ ಗುಣಗಾನಗೈದು ನುಡಿ ನಮನ ಸಲ್ಲಿಸಿದರು.
ಐಟಿಐ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಮಾತನಾಡಿ ದಿವಂಗತರ ಶಿಸ್ತು, ಸಮಯ ಪಾಲನೆ ಹಾಗೂಮಾನ”ಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಶೃದ್ಧಾಂಜಲಿ ಎಂದರು. ವೇದಿಕೆಯಲ್ಲಿ ತರಬೇತಿ ಅಧಿಕಾರಿ ಪೀಟರ್ ಸಿಕ್ವೇರಾ, ಕಚೇರಿ ಅಧೀಕ್ಷಕ ಉಮೇಶ್ ಕೆ. ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗಣ್ಯರು, ಸಿಬ್ಬಂದಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ದಿವಂಗತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಪದ್ಮ ಪ್ರಸಾದ್ ಬಸ್ತಿ, ಕಾರ್ಯಕ್ರಮವನ್ನು ನಿರ್ವಹಿಸಿದರು.