ಪಿಲ್ಯ:  ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ಪಿಲ್ಯ:  ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರು ರವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಹೂ ಮಾಲೆಯನ್ನು ಹಾಕಿ, ಪ್ರತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪುಷ್ಪಾರ್ಚನೆಯನ್ನು ಗೈಯುವ ಮೂಲಕ ಮಕ್ಕಳ ದಿನಾಚರಣೆಯನ್ನು ನ.14 ರಂದು  ಆಚರಿಸಲಾಯಿತು.

ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ  ನಸೀರ್ ಅಹಮದ್ ಖಾನ್ ರವರು ವಹಿಸಿಕೊಂಡು ” ಮಕ್ಕಳು ದೇಶದ ಮುಂದಿನ ಭವಿಷ್ಯ. ನಾಳಿನ ಭಾರತವನ್ನು ಇಂದಿನ ಮಕ್ಕಳು ರೂಪಿಸಲಿದ್ದಾರೆ. ನಾವು ಇಂದು ಯಾವ ರೀತಿ ಮಕ್ಕಳನ್ನು ಮುಂದೆ ತರುತ್ತೇವೆಯೋ ಅದೇ ರೀತಿ ನಾಳಿನ ಭಾರತದ ಭವಿಷ್ಯ ರೂಪುಗೊಳ್ಳುತ್ತದೆ” ಹೀಗಾಗಿ ಮಕ್ಕಳನ್ನು ನೆನಪಿಸಿಕೊಳ್ಳುವುದು ಮತ್ತು ಪ್ರೀತಿಸುವುದು ಈ ಆಚರಣೆಯ ಉದ್ದೇಶ. “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ  ಶಾಂತಿ ರಾಜ್ ಜೈನ್ ರವರು ನೆಹರುರವರ ಬಗ್ಗೆ ಮಾತನಾಡಿ, ಮಕ್ಕಳಿಗೆ ಶುಭಾಶಯವನ್ನು ತಿಳಿಸಿದರು.

5ನೇ ತರಗತಿಯ ವಿದ್ಯಾರ್ಥಿನಿ ನಫ್ಲ ಮತ್ತು 9ನೇ ತರಗತಿಯ ವಿದ್ಯಾರ್ಥಿನಿ ತಸ್ರೀಯ ಮಕ್ಕಳ ದಿನಾಚರಣೆಯ ಮಹತ್ವದ ಕುರಿತು ಭಾಷಣ ಮಾಡಿದರು.

ಶಿಕ್ಷಕಿಯಾದ ಶ್ರೀಮತಿ ಫಾತಿಮತ್ತುಲ್ ಅಫ್ರಾಹ್ ರವರು ನೆಹರೂ ರವರ ಪರಿಚಯ ಮಾಡಿ, ಅವರ ಜನ್ಮದಿನವನ್ನು ಯಾಕೆ ಮಕ್ಕಳ ದಿನಾಚರಣೆಯೆಂದು ಆಚರಿಸಲಾಗುತ್ತದೆ ಎಂಬುವುದರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಿಕ್ಷಕರು ಕೆಲವೊಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಮಕ್ಕಳನ್ನು ರಂಜಿಸಿದರು ‌. ಕೊನೆಯದಾಗಿ ಮಕ್ಕಳ ದಿನಾಚರಣೆ ಅಂಗವಾಗಿ ನ.12 ರಂದು ನಡೆಸಲಾದ ಛದ್ಮವೇಷ ಸ್ಪರ್ಧೆಯ ವಿಜೇತರಿಗೆ ಮತ್ತು ಆ ದಿನ ನಡೆಸಿದ ವಿವಿಧ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಶಾಲಾ ಸಂಚಾಲಕರು ಮತ್ತು ಮುಖ್ಯೋಪಾಧ್ಯಾಯರು ಬಹುಮಾನ ನೀಡಿ ಗೌರವಿಸಿದರು.

ಶಾಲಾ ಮುಖ್ಯೋಪಾಧ್ಯರಾದ ಶಾಂತಿರಾಜ್ ಜೈನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಅಶ್ಮಿತಾ ಸ್ವಾಗತಿಸಿದರು, ಶ್ರೀಮತಿ ನಿಶ್ಮಿತಾ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here