ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.13 ರಂದು ಪೆರಿಯಡ್ಕ ಬಳಿಯ ಕುಂಟಿನಿ ಎಂಬಲ್ಲಿ ನಡೆದಿದೆ.
ಕೂವೆಚ್ಚಾರು ನಿವಾಸಿ ಮೋನಪ್ಪ ಗೌಡರ ಪುತ್ರಿ ತೇಜ(18 ವ) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಇಂದು ಬೆಳಿಗ್ಗೆ ಪೆರಿಯಡ್ಕದ ಹಾಲಿನ ಸೊಸೈಟಿಗೆ ಹಾಲು ತೆಗೆದುಕೊಂಡು ಹೋಗಿದ್ದು, ವಾಪಸ್ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಮನೆಯವರು ಹುಡುಕಾಡಿದಾಗ ಕುಂಟಿನಿ ಎಂಬಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.