Home_Page_Advt
Home_Page_Advt
Home_Page_Advt

ಅಡಿಕೆ ಕಲಬೆರಕೆ ವಿರುದ್ಧ ಕ್ರಮ ಕೈಗೊಳ್ಳಲು ಅಡಿಕೆ ಬೆಳೆಗಾರರ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಡಿಕೆ ಕಲಬೆರಕೆಯನ್ನು ವಿರೋಧಿಸಿ ಮತ್ತು ಅಡಿಕೆ ಕಲಬೆರಕೆ ಮಾಡುತ್ತಿರುವವರ ವಿರುದ್ದ ಸೂಕ್ತ  ಕ್ರಮಕೈಗೊಳ್ಳಬೇಕು ಆಗ್ರಹಿಸಿ ಅಡಿಕೆ ಬೆಳೆಗಾರರ ವೇದಿಕೆಯ ವತಿಯಿಂದ ಜೂ.13ರಂದು ಸಹಾಯಕ ಆಯುಕ್ತ ಹೆಚ್.ಕೆ ಕೃಷ್ಣಮೂರ್ತಿಯವರಿಗೆ  ಮನವಿ ಮಾಡಿದರು.

ದ.ಕ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಗುಣಮಟ್ಟಕ್ಕೆ ಖ್ಯಾತಿಯಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ನಿಯಮಗಳ ಅನುಸಾರ ವಿವಿಧ ರಾಷ್ಟ್ರಗಳೊಂದಿಗಿನ ವ್ಯಾವಹಾರಿಕ ಒಪ್ಪಂದದಿಂದಾಗಿ ಕಾಡುತ್ಪತ್ತಿಯಾಗಿರುವ ಅಡಿಕೆ ದೇಶಿಯ ಮಾರುಕಟ್ಟೆಯನ್ನು ಪ್ರವೇಶಸಿ ಬೆಲೆ ಕುಸಿಯುವಂತೆ ಮಾಡಿದೆ. ಬರ್ಮಾ, ಇಂಡೋನೇಶಿಯಾ, ಮಲೇಶಿಯಾ ಮೊದಲಾದ ದೇಶಗಳಲ್ಲಿನ ಕಾಡುತ್ಪತ್ತಿ ಬೆಳೆಯಾಗಿರುವ ಅಡಿಕೆಯು ಪುತ್ತೂರಿನ ಗಾರ್ಬಲ್‌ಗಳಲ್ಲಿ ಜಿಲ್ಲೆಯ ಅಡಿಕೆಯೊಂದಿಗೆ ಕಲಬೆರಕೆಯಾಗುತ್ತಿರುವುದರಿಂದ ಧಾರಣೆ ತೀವ್ರ ತರದಲ್ಲಿ ಕುಸಿಯುವಂತಾಗಿದೆ. ಇದರಿಂದಾಗಿ ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ. ವ್ಯಾಪಾರಿಗಳು ರೈತರ ಎಲ್ಲಾ ಉತ್ಪನ್ನಗಳಲ್ಲಿ ಕಲಬೆರೆಕೆಯ ದಂಧೆಯ ಮೂಲಕ ಧಾರಣೆ ಕುಸಿಯುವಂತೆ ಮಾಡಿದ್ದು ಕರಿಮೆನಸು, ಗೇರುಬೀಜ, ಕೋಕೋ, ವೆನಿಲಾ ಮೊದಲಾದ ಬೆಳೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತರಿಗೆ ನಿರಂತರವಾಗಿ ಅನ್ಯಾಯ ನಡೆಯುತ್ತಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಕೋಡಿಂಬಾಡಿಗೆ ಒಂದಕ್ಕೆ 100ಟನ್ ಅಡಿಕೆ:
ಕೋಡಿಂಬಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡಿಕೆ ಗಾರ್ಬಲ್ ಒಂದಕ್ಕೆ ೧೦೦ ಟನ್ ವಿದೇಶಿ ಅಡಿಕೆ ಬರುತ್ತಿದ್ದು ಜಿಲ್ಲೆಯ ಅಡಿಕೆಯೊಂದಿಗೆ ಕಲ ಬೆರಕೆಯಾಗುತ್ತಿದೆ. ಜಿಲ್ಲೆಯ ಅಡಿಕೆಗೆ ೨೫೦ ರೂಪಾಯಿಗಳಿದ್ದರೂ ಗಾರ್ಬಲ್‌ಗೆ ಬರುವ ವಿದೇಶಿ ಅಡಿಕೆಯ ಬೆಲೆ ಕೇವಲ ೧೪೫ ರೂಪಾಯಿ. ಕಡಿಮೆ ಬೆಲೆಯಲ್ಲಿ ವಿದೇಶಿ ಅಡಿಕೆಯನ್ನು ಜಿಲ್ಲೆಯ ಅಡಿಕೆಯೊಂದಿಗೆ ಕಲಬೆರಕೆ ಮಾಡುವುದರಿಂದ ಜಿಲ್ಲೆಯ ರೈತರ ಮೇಲೆ ನೇರ ಹೊಡೆತ ಬೀಳುತ್ತಿದೆ ಎಂದು ಕಾಂಗ್ರೆಸ್ ಕಿಸಾನ್ ಘಟಕದ ಉಮಾನಾಥ ಶೆಟ್ಟಿ ಪೆರ್ನೆ ಸಹಾಯಕ ಆಯಕ್ತರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ರೈತರಿಗೆ ಅಡಿಕೆಯೇ ಪ್ರಮುಖ ಬೆಳೆಯಾಗಿದೆ. ಇದಲ್ಲದೆ ಉಪ ಬೆಳೆಗಳಿಲ್ಲಿ. ಹಿಂದೆ ಜಿಲ್ಲೆಯ ಅಡಿಕೆ ಹೊರ ದೇಶಗಳಿಗೆ ಸರಬರಾಜು ಆಗುತ್ತಿತ್ತು. ಆದರೆ ಈಗ ವಿದೇಶಗಳ ಅಡಿಕೆ ಭಾರತಕ್ಕೆ ಸರಬರಾಜು ಆಗುತ್ತಿದೆ. ಇದರಿಂದಾಗಿ ಸುಮಾರು ೩೩೦ರೂಪಾಯಿದ್ದ ಅಡಿಕೆ ಬೆಲೆ ಈಗ ೨೨೦ರೂಪಾಯಿಗೆ ಕುಸಿತವಾಗಿದೆ. ಇದರಿಂದ ರೈತರು ತಮ್ಮ ಅಗತ್ಯ ಕಾರ್ಯಗಳನ್ನು ಪೂರೈಸಲು ಸಂಕಷ್ಟಪಡುವಂತಾಗಿದೆ ಎಂದು ಮುರಳೀಧರ ರೈ ಮಠಂತಬೆಟ್ಟು ಹೇಳಿದರು.

ಲಿಖಿತ ದೂರು ನೀಡಿದರೆ ಸೂಕ್ತ ಕ್ರಮ – ಎಸಿ ಭರವಸೆ:
ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುವ ಗಾರ್ಬಲ್‌ಗಳ ಬಗ್ಗೆ ಮಾಹಿತಿ ನೀಡಿ. ಅವುಗಳನ್ನು ಪರಿಶೀಲನೆ ನಡೆಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆಳಿಗೆ ಸೂಚಿಸಲಾಗುವುದು. ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇಲಾಖೆಗಳಿಗೂ ತನಿಖೆ ನಡೆಸುವಂತೆ ಸೂಚಿಸಲಾಗುವುದು. ಕಾನೂನು ಬಾಹಿರವಾಗಿ ನಡೆಯುವ ಸಂಸ್ಥೆಗಳ ಬಗ್ಗೆ ಲಿಖಿತವಾಗಿ ದೂರು ನೀಡಿ ಅವುಗಳ ಮೇಲೆ ದಾಳಿ ನಡೆಸಿ ಸೂಕ್ತಕ್ರಮಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಕೃಷ್ಣಮೂರ್ತಿ ಹೆಚ್.ಕೆ ಭರವಸೆ ನೀಡಿದರು.

ಅಡಿಕೆ ಬೆಳೆಗಾರರ ವೇದಿಕೆಯ ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಸಂಕಪ್ಪ ಶೆಟ್ಟಿ ಮಠಂತಬೆಟ್ಟು,  ನಿರಂಜನ ರೈ ಮಠಂತಬೆಟ್ಟು, ಉಲ್ಲಾಸ್ ಕೋಟ್ಯಾನ್, ಕೇಶವ ಭಂಡಾರಿ ಕೈಪ, ಸುಬ್ರಹ್ಮಣ್ಯ ಶೆಟ್ಟಿ ರೆಂಜಾಜೆ, ಚಿದಾನಂದ ರೈ ಪಣಿಪಾಲು, ಯತೀಶ್ ಕುಮಾರ್ ಬಾರ್ತಿಕುಮೇರು, ದಿನೇಶ್ ಶೆಟ್ಟಿ ಇಡೆಪುಣಿ, ಜಗನ್ನಾಥ ಶೆಟ್ಟಿ ಇಡೆಪುಣಿ, ಶಿವನಾಥ ರೈ ಮೇಗಿನಗುತ್ತು, ಉಮಾನಾಥ ಶೆಟ್ಟಿ, ಎ. ಜತೀಂದ್ರ ಶೆಟ್ಟಿ ನೆಕ್ಕಿಲಾಡಿ, ವಾರಿಸೇನ ಜೈನ್ ಕೋಡಿಯಾಡಿ, ಆದರ್ಶ ಶೆಟ್ಟಿ ಉಪ್ಪಿನಂಗಡಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಜಾನ್ ಕೆನ್ಯೂಟ್, ಕುಮಾರನಾಥ, ಎ.ಜೆ ರೈ ಚಿಲ್ಮೆತ್ತಾರು ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.