Home_Page_Advt
Home_Page_Advt
Home_Page_Advt

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಪ್ರಕರಣ: ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ವೈದ್ಯರ ಪ್ರತಿಭಟನೆ

                                      ಗಣೇಶ್ ಮುದ್ರಾಜೆ

ಪುತ್ತೂರು: ಜೂನ್ 10ರಂದು ಕೊಲ್ಕತ್ತದ ಎನ್‌ಆರ್‌ಎಸ್ ವೈದ್ಯಕೀಯ ಸಂಸ್ಥೆಯ ಕಿರಿಯ ವೈದ್ಯ ಡಾ. ಪರಿಭಾ ಮುಖರ್ಜಿಯವರ ಮೇಲೆ ರೋಗಿಯ ಸಂಬಂಧಿಕರು ಮಾರಣಾಂತಿಕ ಹಲ್ಲೆ ಮಾಡಿರುವುದನ್ನು ಖಂಡಿಸಿ ಹಾಗೂ ಈ ಘಟನೆಯನ್ನು ಕೂಲಂಕುಶವಾಗಿ ತನಿಖೆ ಮಾಡಿ ಅಪರಾಧಿಗಳಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಲು ಪಶ್ಚಿಮ ಬಂಗಾಳ ಸರಕಾರವನ್ನು ಆಗ್ರಹಿಸಿ ಜೂ.14ರಂದು ದೇಶಾದ್ಯಂತ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪುತ್ತೂರಿನಲ್ಲಿಯೂ ಪುತ್ತೂರು ಐ.ಎಂ.ಎ. ಘಟಕದ ಅಧ್ಯಕ್ಷ ಡಾ.ಗಣೇಶ್ ಪ್ರಸಾದ್ ಮುದ್ರಜೆ ಮತ್ತು ಕಾರ್ಯದರ್ಶಿ ಡಾ.ಅಶೋಕ್‌ರವರ ಕರೆಯಂತೆ ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ್ದಾರೆ.

                            ಡಾ| ಸುರೇಶ್ ಪುತ್ತೂರಾಯ

ಕೇಂದ್ರ ಸರಕಾರವು ವೈದ್ಯರ ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳ ಮೇಲೆ ಹಲ್ಲೆ ತಡೆಗಟ್ಟಲು ರಾಷ್ಟಮಟ್ಟದಲ್ಲಿ ಕಠಿಣವಾದ ಕಾನೂನನ್ನು ಜಾರಿಗೊಳಿಸಬೇಕು, ನಮ್ಮ ರಾಜ್ಯದಲ್ಲಿ ಈಗಾಗಲೇ ಕಳೆದ ೧೦ ವರುಷಗಳಿಂದ ಜಾರಿಯಲ್ಲಿರುವ “Prohibition of violence against Medicare Service Personnel and Damage to Property in Medicare Service Act 2009”  ಕಾನೂನಿನ ಆಧಾರದಲ್ಲಿ ಹಲ್ಲೆ ನಡೆಸಿದ ದುಷ್ಕರ್ಮಿಯನ್ನು ಶಿಕ್ಷೆಗೊಳಪಡಿಸಿದ ಉದಾಹರಣೆ ಇಲ್ಲ. ಆದುದರಿಂದ ಈ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಿ ದುಷ್ಕರ್ಮಿಗೆ ಯಾವುದೇ ರೀತಿಯಲ್ಲಿ ಜಾಮೀನು ಸಿಗದಂತೆ ಮಾಡಿ ಕರ್ತವ್ಯನಿರತ ವೈದ್ಯರಿಗೆ ಯಾವುದೇ ಮಾನಸಿಕ ಹಾಗೂ ದೈಹಿಕ ಹಲ್ಲೆಯಾಗದಿರುವ ವಾತಾವರಣವನ್ನು ಸರಕಾರವು ರೂಪಿಸಬೇಕು ಎಂದು ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಮಿಂಚಂಚೆ ಮೂಲಕ ಕಳುಹಿಸಿರುತ್ತೇವೆ. ಈ ರೀತಿಯ ಘಟನೆಗಳು ವೈದ್ಯ ಹಾಗೂ ರೋಗಿಯ ಪವಿತ್ರ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಸರಿಯಾದ ಚಿಕಿತ್ಸೆ ಕೊಡಲು ತೊಡಕನ್ನುಂಟುಮಾಡುತ್ತದೆ ಹಾಗೂ ಇಡೀ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತದೆ ಆದ್ದರಿಂದ ವೈದ್ಯರ ಮೇಲಿನ ಹಲ್ಲೆ ಘಟನೆಗಳಿಗೆ ಕಠಿಣವಾದ ಕಾನೂನು ಕ್ರಮ ಜರುಗಿಸಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ.

 ಡಾ| ಭವಾನಿಶಂಕರ್
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.