ಮಚ್ಚಿನ: ಹಲವು ಸಮಯಗಳಿಂದ ಬೇಡಿಕೆಯಿಟ್ಟಿದ್ದ ಬಳ್ಳಮಂಜ ಅಂಬೇಟ್ಟು ಪನಕಜೆ ರಸ್ತೆಯ ಕೆಲಸವು ಪ್ರಗತಿಯಲ್ಲಿದ್ದು , ವಡ್ಡ ಪಾಲ್ಯರ ಹಲವು ಕಡೆಗಳಲ್ಲಿ ಮೋರಿ ಕೆಲಸವು ಪೂರ್ಣಗೊಂಡಿದೆ. ಬಳ್ಳಮಂಜ ಪೇಟೆಯ ಯಲ್ಲಿ ಕಾಂಕ್ರೀಟ್ ಕರಣಗಳು ಪ್ರಾರಂಭಗೊಂಡಿದ್ದು, ಜನರ ಬೇಡಿಕೆ ಶೀಘ್ರದಲ್ಲಿ ಈಡೇರಿದಂತಾಗಿದೆ.
ರಸ್ತೆಯು ಅಗಲೀಕರಣ ಗೊಳ್ಳುತ್ತಿದ್ದು ಜನರು, ವಾಹನ ಚಾಲಕರು ಅದೇ ರೀತಿ ಅಂಗಡಿ ಮಾಲೀಕರು ಈ ಕಾಮಗಾರಿಯು ಪೂರ್ಣಗೊಳ್ಳುವರೆಗೂ ಸಹಕರಿಸುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ ಕೋರಿಕೊಂಡರು.