ಬೆಳ್ತಂಗಡಿ: ಯಕ್ಷದ್ರುವ ಪಟ್ಲ ಫೌಂಡೇಶನ್ ರಿ. ಮಂಗಳೂರು ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ಇದರ ವತಿಯಿಂದ ಯಕ್ಷಧ್ರುವ ಸಂಭ್ರಮ 2022 ನ. 19ರಂದು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ನಡೆಯಲಿದೆ ಎಂದು ಯಕ್ಷ ಧ್ರುವ ಪಟ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಹೇಳಿದರು.
ನಂ.16ರಂದು ಉಜಿರೆಯ ಓಷಿಯನ್ ಪರ್ಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂಜೆ 4ಗಂಟೆಗೆ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗ ವ್ರಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ದೇವಿ ಮಹಾತ್ಮೆ ನಡೆಯಲಿದೆ. ಸಂಜೆ ಗಂಟೆ 8ರಿಂದ ಸಭಾ ಕಾರ್ಯಕ್ರಮ. ಯಕ್ಷದ್ರುವ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ ನವಶಕ್ತಿ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ , ವಿಧಾನಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್
ಹರೀಶ್ ಕುಮಾರ್ , ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್‌ಕೃಷ್ಣ ಪಡ್ನೆವಟ್ನಾಯ ಯು, ಸ್ಥಾಪಕಾಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ.) ಸತೀಶ್ ಶೆಟ್ಟಿ ಪಟ್ಲ
ಲಕ್ಷ್ಮೀ ಗ್ರೂಪ್ಸ್ ಮಾಲಕರಾದ ಮೋಹನ್ ಕುಮಾರ್, ಸಂದ್ಯಾ ಟ್ರೇಡರ್‍ಸ್ ಉಜಿರೆ ಮಾಲಕರಾದ ರಾಜೇಶ್ ಪೈ, ಉಜಿರೆ ಗ್ರಾಮ ಪಂಚಾಯತ್, ಅಧ್ಯಕ್ಷರಾದ ಪುಷ್ಪಾವತಿ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಯಕ್ಷಧ್ರುವ ಪಟ್ಲ ಘಟಕ, ಬೆಳ್ತಂಗಡಿ ಯ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಯಕ್ಷ ಧ್ರುವ ಪಟ್ಲ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಭುಜಬಲಿಪ್ರಸಾವಿಕ ವಾಗಿ ಮಾತನಾಡಿದರು. ಕಾರ್ಯದರ್ಶಿ ಶಿತಿಕಂಠ ಭಟ್ ಧನ್ಯವಿತ್ತರು. ಸದಸ್ಯರಾದ ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.