Home_Page_Advt
Home_Page_Advt
Home_Page_Advt

ಉಪ್ಪಿನಂಗಡಿ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
  • ಉತ್ತಮ ಆರೋಗ್ಯ ವೃದ್ಧಿಗಾಗಿ ಪ್ರಕೃತಿ ಸಮತೋಲನಕ್ಕೆ ಒತ್ತು ಕೊಡಬೇಕು-ಅಬ್ದುಲ್ ರಹಿಮಾನ್
  • ಪರಿಸರ ನಾಶದಿಂದಾಗಿ ತಾಪಮಾನ ಜಾಸ್ತಿ ಆಗುತ್ತಿದೆ-ಸುಜಾತ ಕೃಷ್ಣ
  • ವಿದ್ಯಾರ್ಥಿ ವರ್ಷಕ್ಕೆ ಕನಿಷ್ಠ 1 ಗಿಡವಾದರೂ ನೆಡುವ ಪರಿಪಾಠ ಬೆಳೆಸಿಕೊಳ್ಳಬೇಕು-ಸುರೇಶ್ ಅತ್ರಮಜಲು


ಉಪ್ಪಿನಂಗಡಿ: ಅಭಿವೃದ್ಧಿ ಹೆಸರಿನಲ್ಲಿ ಶುದ್ಧ ಆಮ್ಲಜನಕ ಕೊಡುವ ಮರಗಳನ್ನು ಕಡಿಯಲಾಗುತ್ತದೆ, ಇದರ ದುಷ್ಪರಿಣಾಮ ಮುಂದಿನ ದಿನಗಳಲ್ಲಿ ಮಾರಕ ಆಗಲಿದ್ದು, ಮರ, ಗಿಡಗಳನ್ನು ಪೋಷಿಸುವ ಮತ್ತು ನೆಡುವ ಮೂಲಕ ಮುಂದಿನ ತಲೆಮಾರಿನ ಜನರ ಉತ್ತಮ ಆರೋಗ್ಯ ವೃದ್ಧಿಗಾಗಿ ಪ್ರಕೃತಿ ಸಮತೋಲನಕ್ಕೆ ಒತ್ತು ಕೊಡಬೇಕು ಎಂದು
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಹೇಳಿದರು.

ಅವರು ಜೂನ್ 14ರಂದು ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ ಸಲುವಾಗಿ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್‍ಯಕ್ರಮದಲ್ಲಿ  ಮಾತನಾಡಿದ ಅವರು ಕಾಡು ಬರಿದಾಗುವುದರಿಂದಾಗಿ ಪ್ರಕೃತಿ ಮುನಿಸಿಕೊಂಡು ಮಳೆ ದೂರವಾಗುತ್ತಿದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಸರ ಉಳಿಸುವುದರ ಜೊತೆಗೆ ಮರ,
ಗಿಡಗಳನ್ನು ನೆಡುವ ಬಗ್ಗೆ ಚಿಂತಿತರಾಗಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಜಾತಕೃಷ್ಣ ಮಾತನಾಡಿ ಕಾಡು, ಮರಗಳನ್ನು ಕಡಿದ ಪರಿಣಾಮ ಬಿಸಿಲಿನ ತಾಪಮಾನ ಜಾಸ್ತಿ ಆಗಿದೆ, ಇದನ್ನು ಸಮತೋಲನದಿಂದ  ಕಾಪಾಡುವ ಸಲುವಾಗಿ ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಕಾಳಜಿ ಬೆಳಿಸಿಕೊಳ್ಳಬೇಕು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ ಅತ್ರಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿ ೧೦ ವರ್ಷದಿಂದ ತಾಪಮಾನ ಜಾಸ್ತಿ ಆಗಿದೆ, ಮುಂದಿನ ದಿನಗಳಲ್ಲಿ ಇದರ ಸಮತೋಲನ ಕಾಪಾಡಲು ನಮ್ಮ ಕಾಲೇಜಿನಲ್ಲಿ ೮೦೦ ವಿದ್ಯಾರ್ಥಿಗಳು ತನ್ನ ಮನೆಯಲ್ಲಿ, ಅಥವಾ ತಮಗೆ ತೋಚಿದ ಜಾಗ ಇರುವಲ್ಲಿ ವರ್ಷಕ್ಕೆ ಕನಿಷ್ಠ ೧ ಗಿಡವಾದರೂ ನೆಡಬೇಕು, ಅದರಲ್ಲೂ ಪ್ರಾಣಿ, ಪಕ್ಷಿಗಳಿಗೆ ಆಹಾರ ದೊರಕುವಂತಹ ಮರ, ಗಿಡಗಳನ್ನು ಬೆಳೆಸಬೇಕು ಆದಾಗ ಮಾತ್ರ ನಮ್ಮ ಉದ್ದೇಶ ಸಾರ್ಥಕ ಆಗಲಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಮಂಜುನಾಥ ಸ್ವಾಗತಿಸಿ, ಶಿಕ್ಷಕಿ ಜಯಶ್ರೀ ವಂದಿಸಿದರು. ಹೆಚ್.ಜೆ. ರಮೇಶ್ ಕಾರ್‍ಯಕ್ರಮ ನಿರೂಪಿಸಿದರು. ಕಾರ್‍ಯಕ್ರಮಕ್ಕೆ ಮುನ್ನ ಕಾಲೇಜಿನ ಕಳೆದ ಸಾಲಿನ ವಿದ್ಯಾರ್ಥಿಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ತೇಜ ಕುಮಾರಿ ಅವರಿಗೆ ಸಂತಾಪ ಸೂಚಿಸಲಾಗಿ ಮೌನ ಪ್ರಾರ್ಥನೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.