ಕಡಬ : ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಜೆ.ಪಿ ಕಾಂಪ್ಲೆಕ್ಸ್ ನಲ್ಲಿ ರಾಮ್ದೇವ್ ಫ್ಯಾನ್ಸಿ ಹಾಗೂ ಗಿಫ್ಟ್ ಸೆಂಟರ್ ಜೂ. 14ರಂದು ಶುಭಾರಂಭಗೊಂಡಿತು. ಸಂಸ್ಥೆಯ ಮಾಲಕರಾದ ಸಿ.ಆರ್ ಪಟೇಲ್, ಗ್ರಾಹಕರನ್ನು ಬರಮಾಡಿಕೊಂಡು ಮಾತನಾಡಿ ನಮ್ಮ ಸಂಸ್ಥೆಯು ಹಲವಾರು ವರ್ಷಗಳಿಂದ ಸುಳ್ಯದಲ್ಲಿ ಕಾರ್ಯಾಚರಿಸುತ್ತಿದ್ದು ಈಗಾಗಲೇ ನಮ್ಮ ವಿಸ್ತೃತ ಸಂಸ್ಥೆ ಕಡಬದಲ್ಲಿ ಪ್ರಾರಂಭಗೊಂಡಿದ್ದು ನಮ್ಮಲ್ಲಿ ಆರ್ಟಿಫಿಶಿಯಲ್ ಜ್ಯುವೆಲರಿ, 1 ಗ್ರಾಮ್ ಗೋಲ್ಡ್ ಜ್ಯುವೆಲರಿ, ಬ್ಯಾಂಗಲ್ಸ್, ಕಾಸ್ಮೆಟಿಕ್ಸ್, ಗಿಪ್ಟ್ ಬ್ಯಾಗ್ಸ್ , ಸ್ಟೇಷನರೀಸ್, ರೈನ್ಕೋಟ್, ಬ್ರಾಂಡೆಡ್ ಕೊಡೆಗಳು, ಪ್ಲಾಸ್ಟಿಕ್ಸ್, ಗ್ರೋಸರಿ, ಎಲ್ಲಾ ರೀತಿಯ ಫ್ಯಾನ್ಸಿ ಐಟಂಗಳು ನಮ್ಮಲ್ಲಿ ದೊರೆಯುತ್ತದೆ. ಗ್ರಾಹಕರ ಸಹಕಾರವೇ ನಮ್ಮ ಯಶಸ್ವಿಗೆ ಮೂಲವಾಗಿದೆ ಎಂದರು.
ಸಂಸ್ಥೆಯ ಎಚ್.ಆರ್ ಪಟೇಲ್, ಪಿ.ಆರ್ ಪಟೇಲ್,ಬವರ್ ಲಾಲ್, ಶಿವರಾಂ ಕಡಬದ ಓಂಕಾರ್ ಸ್ಟೀಟ್ಸ್ ಮಾಲಕ ರಾಜಕುಮಾರ್, ಕಡಬ ಹಿರಿಯ ತರಕಾರಿ ಸಾಂತಪ್ಪ ಗೌಡ, ಕೆ.ವೈ ಪೂಟ್ವೇರ್ ಮಾಲಕ ಖಾಲಿದ್, ಶ್ರೀ ಗಣೇಶ್ ಎಲೆಕ್ಟ್ರಾನಿಕ್ಸ್ ಮಾಲಕ ಶಾಂತರಾಮ ಶೆಟ್ಟಿ, ಸುರಕ್ಷಾ ಪೈಂಟ್ಸ್ ಮಾಲಕ ಸುರೇಶ್ ಕಲ್ಲೆಂಬಿ, ಶ್ರೀ ಲಕ್ಷ್ಮೀ ಫ್ಯಾನ್ಸಿ ಮಾಲಕ ರವೀಂದ್ರ ಶೆಟ್ಟಿ, ಮರಿಯಾ ಎಲೆಕ್ಟ್ರಿಕಲ್ಸ್ನ ಶೀನಪ್ಪ , ಜೆ.ಪಿ ಕಟ್ಟಡ ಮಾಲಕ ಜೋಸ್ ಪ್ರಕಾಶ್, ಕೋಡಿಂಬಾಳ ನಂದಿ ಟೆಕ್ಸ್ಟೈಲ್ಸ್ ಮಾಲಕಿ ಚಂದ್ರಾವತಿ, ಜಲಜಕ್ಷಿ ಕೋಡಿಂಬಾಳ ಸೇರಿದಂತೆ ಹಲವಾರು ಗ್ರಾಹಕರು ಆಗಮಿಸಿ ತಮ್ಮ ತಮ್ಮ ಆಯ್ಕೆಯ ವಸ್ತುಗಳನ್ನು ಖರೀದಿಸಿ ಸಂಸ್ಥೆಗೆ ಶುಭಹಾರೈಸಿದರು.