ಬೆಳ್ತಂಗಡಿ: ನಡ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಲಯನ್ಸ್ ಕ್ಲಬ್ ಪ್ರಾಂತ್ಯ 5 ರ ಅಧ್ಯಕ್ಷ ವಸಂತ ಶೆಟ್ಟಿ ಅವರ ಪ್ರಾಂತ್ಯ ಸಮ್ಮೇಳನದ ನೆನಪಿನ ಶಾಶ್ವತ ಕೊಡುಗೆಯ ಭಾಗವಾಗಿ 3.20 ಲಕ್ಷ ರೂ. ವೆಚ್ಚದಲ್ಲಿ ಗಣಕ ಯಂತ್ರಗಳ ಲೇಬ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಲಯನ್ಸ್ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ನೂತನ ಕಂಪ್ಯೂಟರ್ ಕೇಂದ್ರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ವಹಿಸಿದ್ದರು.
ಸಮಾರಂಭದಲ್ಲಿ ನಡ ಗ್ರಾ.ಪಂ ಅಧ್ಯಕ್ಷ ವಿಜಯ ಗೌಡ, ನಡ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗಾ, ಎಸ್‌ಡಿಎಂಸಿ ಅಧ್ಯಕ್ಷ ವಸಂತ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರಣೇಂದ್ರ ಜೈನ್, ಲಯನ್ಸ್ ಪ್ರಾಂತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕಾರ್ಯಾಧ್ಯಕ್ಷ ಹೇಮಂತ ರಾವ್ ಯರ್ಡೂರು, ಕೋಶಾಧಿಕಾರಿ ಲಯನ್ ಸುರೇಂದ್ರ, ವಲಯಾಧ್ಯಕ್ಷ ಜೇಮ್ಸ್ ಮೆಂಡ, ಮುಚ್ಚೂರು ನೀರುಡೆ ಘಟಕದ ಅಧ್ಯಕ್ಷ ಸ್ಟೇನಿ ಮಿರಾಂದ, ಗುರುಪುರ ಕೈಕಂಬ ಘಟಕದ ಅಧ್ಯಕ್ಷ ಮೆಲ್ವಿನ್ ಸಲ್ಡಾನಾ, ಜಿಲ್ಲಾ ಸಂಪುಟ ಗ್ಲೋಬಲ್ ಸರ್ವಿಸ್ ಕೋರ್ಡಿನೇಟರ್ ಓಸ್ವಾಲ್ಡ್ ಡಿಸೋಜಾ, ಲಯನ್ಸ್ ಕ್ಲಬ್ ಬೆಳ್ತಂಗಡಿ ಕಾರ್ಯದರ್ಶಿ ತುಕಾರಾಮ ಬಿ, ರಾಮಕೃಷ್ಣ ಗೌಡ, ರಘುರಾಮ ಶೆಟ್ಟಿ, ಅಶ್ರಫ್ ಆಲಿಕುಂಞಿ ಮುಂಡಾಜೆ, ಮೇದಿನಿ ಡಿ ಗೌಡ, ಸುಭಾಷಿಣಿ, ಧತ್ತಾತ್ರೇಯ ಜಿ, ಜೆಫ್ರಿಯನ್ ತಾವ್ರೂ, ರೋಶನ್ ಡಿಸೋಜಾ, ಜಯಂತ ಶೆಟ್ಟಿ ಕುಂಟಿನಿ, ರಘುರಾಮ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾ ಅತಿಥಿಗಳನ್ನು ಬರಮಾಡಿಕೊಂಡರು. ಶಿಕ್ಷಕಿ ಸುಜಾತಾ ಎಸ್ ಕಾರ್ಯಕ್ರಮ ನಿರೂಪಿಸಿದರು. ವಿಕ್ಟರ್ ಮಾಡ್ತಾ ಸಹಕರಿಸಿದರು. ಅಮೃತಾ ಧನ್ಯವಾದವಿತ್ತರು.