ಕಡಬ : ಕುಟ್ರುಪ್ಪಾಡಿ ಗ್ರಾಮದ ಹೊಸಮಠ ರಾಜ್ಯ ಹೆದ್ದಾರಿ ಬದಿಯಲ್ಲಿ ಇರುವ ಕುಟ್ರುಪ್ಪಾಡಿ ಗ್ರಾ.ಪಂ ಕಟ್ಟಡದಲ್ಲಿ ನ್ಯೂ ಅಕ್ಷರದೇವಿ ಫ್ಯಾನ್ಸಿ ಮತ್ತು ಟೈಲರಿಂಗ್ ಸಂಸ್ಥೆ ಜೂ .14 ರಂದು ಶುಭಾರಂಭಗೊಂಡಿತು. ಕುಟ್ರುಪ್ಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಗೋಗಟೆ ಸಂಸ್ಥೆಯನ್ನು ದ್ವೀಪ ಪ್ರಜ್ವಲನಗೊಳಿಸುವ ಮೂಲಕ ಉದ್ಘಾಟಿಸಿದರು.
ಕುಟ್ರುಪ್ಪಾಡಿ ಗ್ರಾ.ಪಂ ಸದಸ್ಯೆ ಸೂಸಮ್ಮ , ಸ್ತ್ರೀಶಕ್ತಿ ಗೊಂಚಲಿನ ಅಧ್ಯಕ್ಷೆ ಆಲೀಸ್ ತೋಮಸ್ , ಕಾರ್ಯದರ್ಶಿ ಮೋಹಿನಿ, ಪುತ್ತೂರು ತಾ. ಮಹಿಳಾ ಬ್ಲಾಕ್ ಸೊಸೈಟಿಯ ಕಾರ್ಯದರ್ಶಿ ಜಯಶ್ರೀ , ಸಂಸ್ಥೆಗೆ ಶುಭಹಾರೈಸಿದರು ಗ್ರಂಥಪಾಲಕಿ ಚಂದ್ರಾವತಿ, ಸರಸ್ವತಿ ಹೊಸ್ಮಠ, ಚಿನ್ನಮ್ಮ ಹೊಸ್ಮಠ, ಗಂಗಾಧರ, ನಾರಾಯಣ ಗೌಡ, ಶಿವರಾಮ, ಪ್ರಶಾಂತ್, ಶೇಷವೇಣಿ ರಮೇಶ್ , ಚೈತ್ರ, ವಾಸು ಗೌಡ, ಸೀತಾರಾಮ ಗೌಡ, ಲಕ್ಷ್ಮೀ ಅಜ್ಜರಮೂಲೆ, ವಾರಿಜ, ಹೊಸ್ಮಠ ಆಟೋ-ಜೀಪು ಮಾಲಕರಾದ, ಸುಂದರ ಗೌಡ ಉಳಿಪ್ಪು, ಸೂರಪ್ಪ ಗೌಡ , ಗಿರಿಧರ ಗೌಡ, ಸಂದೀಪ್, ಮೊದಲಾದವರು ಗ್ರಾಹಕರಾಗಿ ಸಂಸ್ಥೆಯಿಂದ ವಿವಿಧ ವಸ್ತುಗಳನ್ನು ಖರೀದಿಸಿದರು. ಪ್ರಥಮ ಗ್ರಾಹಕರಾಗಿ ರಮೇಶ್ , ಗ್ರಾ.ಪಂ ಅಧ್ಯಕ್ಷೆ ವಿದ್ಯಾಗೋಗಟೆ, ಬ್ಲಾಕ್ ಸೊಸೈಟಿ ಕಾರ್ಯದರ್ಶಿ ಮೋಹಿನಿ, ಹೊಲಿಗೆ ಅಂಗಡಿ ಪ್ರೇಮ, ಮೊದಲಾದವರು ಉತ್ತಮ ತರಹದ ಸೀರೆಗಳನ್ನು ಖರೀದಿಸಿದರು. ಸಂಸ್ಥೆ ಉದ್ಘಾಟನೆಗೊಳ್ಳುತ್ತಿದ್ದಂತೆ ಗ್ರಾಹಕರು ತಾನು ಮುಂದು ನಾನು ಮುಂದು ಎಂಬಂತೆ ಬಟ್ಟೆ, ಫ್ಯಾನ್ಸಿ, ವಸ್ತುಗಳನ್ನು ಖರೀದಿಸಿದರು. ಸಂಸ್ಥೆಯ ಮಾಲಕಿ ಸುಗುಣ ದೇವಯ್ಯ ಅತಿಥಿಗಳನ್ನು ಹಾಗೂ ಗ್ರಾಹಕರನ್ನು ಸಿಹಿ ತಿಂಡಿ ಕೊಟ್ಟು ಬರಮಾಡಿಕೊಂಡರು. ದೇವಯ್ಯ, ಅಕ್ಷತಾ, ರವೀಶ್ ಸಹಕರಿಸಿದರು.