ಜ್ಯೋತಿ ಆಸ್ಪತ್ರೆ ಹಾಗೂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿಯಲ್ಲಿ ಮಕ್ಕಳ ದಿನಾಚರಣೆ

0

ಜ್ಯೋತಿ ಆಸ್ಪತ್ರೆ ಹಾಗೂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿಯಲ್ಲಿ ನ.12ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು .

ಇದರ ಪ್ರಯುಕ್ತ ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜ್ಯೋತಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಅನೂಜ ರವರು ಮಕ್ಕಳಿಗೆ ಶುಭಾಶಯವನ್ನು
ಹಾರೈಸಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು ಹಾಗೂ ಆಸ್ಪತ್ರೆಯ ವೈದ್ಯರಾದ ಡಾ ಶರೋನ್ ರವರು ವೈಯಕ್ತಿಕ ಶುಚಿತ್ವ ಹಾಗೂ ಉತ್ತಮ ಜೀವನ ಶೈಲಿಯ
ಕುರಿತು ಮಕ್ಕಳಿಗೆ ತರಬೇತಿಯನ್ನು ನೀಡಿದರು .

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ  ಮೇರಿಲೆಟ್ ,ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ  ಗಣೇಶ್ ,  ಅಧ್ಯಕ್ಷರಾದ  ಸೌಮ್ಯ ರವರು ಹಾಗೂ ಕರ್ನೋಡಿ ಶಾಲೆಯ ಮುಖ್ಯೋಪಾದ್ಯಾಯ ಜಗನ್ನಾಥ್ ರವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಕರ್ನೋಡಿ ಶಾಲೆಯ ಅಧ್ಯಾಪಕರಾದ ಕೃಷ್ಣ ಕುಮಾರ್ ರವರು ನಿರೂಪಿಸಿ, ಮುಖ್ಯೋಪಾದ್ಯಾಯರಾದ ಜಗನ್ನಾಥ್ ರವರು ಸ್ವಾಗತಿಸಿ,  ಉಷಾ
ರವರು ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here