HomePage_Banner
HomePage_Banner
HomePage_Banner

ಸಂತಾನ ವಂಚಿತರಿಗೆ ಇವರ ಮದ್ದೇ ದಿವ್ಯಔಷಧ..! ಗ್ರಾಮೀಣ ಭಾಗದ ನಾಟಿ ವೈದ್ಯೆ ಪದ್ಮಾವತಿ ಪರ್ಪುಂಜ

Puttur_Advt_NewsUnder_1
Puttur_Advt_NewsUnder_1

@ ಸಿಶೇ ಕಜೆಮಾರ್

ಪುತ್ತೂರು: ನಾಟಿ ವೈದ್ಯಕೀಯ ಪರಂಪರೆಗೆ ಬಹಳಷ್ಟು ವರ್ಷಗಳ ಇತಿಹಾಸವಿದೆ. ಪುರಾಣಗಳಲ್ಲೂ ನಾಟಿ ವೈದ್ಯಕೀಯ ಪದ್ಧತಿ ಬಳಕೆಯಲ್ಲಿತ್ತು. ತುಳುನಾಡಿನಲ್ಲಿ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಒಬ್ಬರು ಪ್ರಸಿದ್ಧ ನಾಟಿ ವೈದ್ಯರಾಗಿದ್ದರು ಎಂಬುದು ಕಥೆಯಿಂದ ತಿಳಿದು ಬರುತ್ತದೆ. ಪ್ರತಿಯೊಂದು ಸಮಸ್ಯೆಗೂ ನಾಟಿ ವೈದ್ಯಕೀಯದಲ್ಲಿ ಔಷಧಗಳಿವೆ. ಸಂತಾನವಿಲ್ಲದವರಿಂದ ಹಿಡಿದು ಸೋಂಕು ತನಕ ಎಲ್ಲದಕ್ಕೂ ನಾಟಿ ವೈದ್ಯಕೀಯ ಮದ್ದು ನೀಡುತ್ತದೆ.ಇಂತಹ ಓರ್ವ ನಾಟಿ ವೈದ್ಯೆ ಒಳಮೊಗ್ರು ಗ್ರಾಮದ ಪರ್ಪುಂಜದಲ್ಲಿ ವಾಸವಿದ್ದಾರೆ. ಅವರೇ ಪದ್ಮಾವತಿ.

ಮಕ್ಕಳಿಲ್ಲದವರ ಕೊರಗು ನಿವಾರಿಸಿದ್ದಾರೆ
ಮಕ್ಕಳಿರಲ್ಲವ್ವ ಮನೆ ತುಂಬಾ ಎಂಬುದು ಹಳೆಯ ಜನಪದ ಮಾತು. ಮದುವೆಯಾದ ಮೇಲೆ ಒಂದಾದರೂ ಮಗು ಬೇಕು ಎನ್ನುವುದು ಪ್ರತಿಯೊಬ್ಬ ದಂಪತಿಯ ಬಯಕೆ. ಆದರೆ ಅದೆಷ್ಟೋ ಮಹಿಳೆಯರು ಸಂತಾನ ಭಾಗ್ಯದಿಂದ ವಂಚಿತರಾಗಿ ಬಿಡುತ್ತಾರೆ. ಕಾರಣಗಳು ಹಲವು ಇರಬಹುದು.ಕೆಲವೊಮ್ಮೆ ಆಧುನಿಕ ವೈದ್ಯಕೀಯ ಕ್ಷೇತ್ರಕ್ಕೂ ಸಮಸ್ಯೆ ಸರಿಪಡಿಸಲು ಅಸಾಧ್ಯವಾಗುತ್ತದೆ. ಆದರೆ ನಾಟಿ ವೈದ್ಯಕೀಯದಲ್ಲಿ ಮಕ್ಕಳಾಗದವರಿಗೆ ಮಕ್ಕಳಾದ ಹಲವು ನಿದರ್ಶನಗಳು ಇವೆ. ಪದ್ಮಾವತಿಯವರು ಕಳೆದ 30 ವರ್ಷಗಳಿಂದ ಹಲವು ಮಂದಿಗೆ ಸಂತಾನಭಾಗ್ಯಕ್ಕಾಗಿ ನಾಟಿ ಔಷಧ ನೀಡಿದ್ದಾರೆ. ಪದ್ಮಾವತಿ ಹೇಳಿದಂತೆ ಮದ್ದು ಸೇವಿಸಿದ ಸುಮಾರು 20 ಕ್ಕೂ ಅಧಿಕ ಮಂದಿಗೆ ಮಕ್ಕಳಾಗಿದೆ. ಮಕ್ಕಳಾಗದ ಮಹಿಳೆಯರ ವಯಸ್ಸು 35 ಕ್ಕಿಂತ ಕಡಿಮೆ ಇರಬೇಕು ಎನ್ನುತ್ತಾರೆ ಪದ್ಮಾವತಿಯವರು.

ಸರ್ಪ ಸುತ್ತು, ಕೆಂಪು, ಬಿಸುರ್ಪುಗೆ ಔಷಧಗಳಿವೆ
ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಾಗಿ ಕಾಡುವ ಸರ್ಪ ಸುತ್ತು, ಬಿಸುರ್ಪು (ದಡಾರ), ಕೆಂಪು, ಮೈಯಲ್ಲಿ ಬೀಳುವುದು ಇತ್ಯಾದಿಗಳಿಗೆ ಪದ್ಮಾವತಿಯವರು ಔಷಧ ನೀಡುತ್ತಾರೆ. ಸರ್ಪ ಸುತ್ತು, ಬಿಸುರ್ಪು ಇತ್ಯಾದಿ ಖಾಯಿಲೆಗಳು ಕೆಲವೊಮ್ಮೆ ಇಂಗ್ಲೀಷ್ ಮದ್ದಿಗೂ ಬಗ್ಗುವುದಿಲ್ಲ ಆದರೆ ನಾಟಿ ಔಷಧಿಗೆ ಬಲು ಬೇಗನೆ ಗುಣಮುಖವಾಗುತ್ತದೆ ಎನ್ನುತ್ತಾರೆ ಪದ್ಮಾವತಿ. ಮೈಯಲ್ಲಿ ಬೀಳುವುದು ಎನ್ನುವುದು ಮಕ್ಕಳಿಗೆ ಅತೀ ಹೆಚ್ಚು ಕಾಡುವ ಖಾಯಿಲೆಯಾಗಿದೆ. ಇದಲ್ಲದೆ ಕೆಂಪು ಇತ್ಯಾದಿಗಳಿಗೆ ಮಕ್ಕಳನ್ನು ಹಿಂಡಿಹಿಪ್ಪೆ ಮಾಡಿ ಬಿಡುತ್ತದೆ.

ಬಾಯಿ ಹುಣ್ಣು, ಮುಟ್ಟಿನ ತೊಂದರೆಗೂ ನಾಟಿ ಮದ್ದಿದೆ
ಕೆಲವೊಮ್ಮೆ ಸೋಂಕು ಆಗುವುದರಿಂದ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಳ್ಳಿ ಭಾಷೆಯಲ್ಲಿ ದೃಷ್ಟಿ ತಾಗಿದ್ದು ಎನ್ನುತ್ತಾರೆ. ಚಿಕ್ಕ ಮಕ್ಕಳಿಗೆ ದೃಷ್ಟಿ ತಾಕದಂತೆ ಪಂಚಲೋಹದ ಬಲೆಗಳನ್ನು ತೊಡಿಸುತ್ತಾರೆ. ಯಾರಿಗಾದರೂ ದೃಷ್ಟಿ ತಾಕಿ ತೊಂದರೆಯಾದರೆ ಅದಕ್ಕೂ ನಾಟಿ ಔಷಧಗಳಿವೆ. ಸೊಪ್ಪು ಹಾಕುವುದು, ಬಿಸಿನೀರು ಅಥವಾ ಬೆಂಕಿ ಬಿದ್ದು ಗುಳ್ಳೆಗಳಾಗಿದ್ದರೆ ಅದಕ್ಕೂ ಔಷಧಿ ಕೊಡುತ್ತಾರೆ. ಇಷ್ಟೇ ಅಲ್ಲದೆ ಅದೆಷ್ಟೋ ಯುವತಿಯರು ಮುಟ್ಟಿನ ಸಮಸ್ಯೆಯಲ್ಲಿ ಹೊಟ್ಟೆನೋವಿನ ತೊಂದರೆಯನ್ನು ಅನುಭವಿಸುತ್ತಾರೆ. ಋತುಸ್ರಾವದ ಸಮಯದಲ್ಲಿ ಆಗುವ ವಿಪರೀತ ಹೊಟ್ಟೆನೋವಿಗೆ ಪದ್ಮಾವತಿಯವರು ನಾಟಿ ಔಷಧಿ ನೀಡುತ್ತಾರೆ. ಸೋಂಕುಗೆ ನೂಲು ಮಂತ್ರಿಸಿ ಕೊಡುವುದು ಇವರಲ್ಲಿದೆ.

ಕುಟುಂಬದಿಂದ ಬಂದದ್ದು
ಪದ್ಮಾವತಿಯವರ ತಾಯಿ ಲಕ್ಷ್ಮೀಯವರು ನಾಟಿ ವೈದ್ಯರಾಗಿದ್ದರು. ತಾಯಿಯಿಂದ ಕಲಿತ ವಿದ್ಯೆ ಇದಾಗಿದೆ ಎನ್ನುವ ಇವರು ಪರ್ಪುಂಜದಲ್ಲಿ ಪತಿ ಚಿಕ್ಕಪ್ಪು ಪೂಜಾರಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಇವರ ನಾಟಿ ವೈದ್ಯಕೀಯ ಸೇವೆಯನ್ನು ಗುರುತಿಸಿದ ಸ್ಥಳೀಯ ಪರ್ಪುಂಜದ ಸ್ನೇಹ ಯುವಕ ಮಂಡಲ ಸನ್ಮಾನಿಸಿದೆ. ಹಲವು ಸನ್ಮಾನಗಳನ್ನು ಪಡೆದುಕೊಂಡಿರುವ ಇವರು ದಿನದ ಎಲ್ಲಾ ಸಮಯ ಮನೆಯಲ್ಲೆ ಇರುತ್ತಾರೆ. ಇವರನ್ನು ಸಂಪರ್ಕಿಸುವವರು ಸಂಚಾರಿ ವಾಣಿ 9108123069 ಗೆ ಕರೆ ಮಾಡಬಹುದಾಗಿದೆ.

ಕಳೆದ 30 ವರ್ಷಗಳಿಂದ ನಾಟಿ ಔಷಧಿ ನೀಡುತ್ತಾ ಬಂದಿದ್ದೇನೆ. ಮಕ್ಕಳಾಗದೆ ಇದ್ದ ಸುಮಾರು 20 ಕ್ಕೂ ಹೆಚ್ಚು ಮಂದಿಗೆ ಮಕ್ಕಳಾಗಿದೆ. ಕೆಂಪು, ಸರ್ಪ ಸುತ್ತು, ಬಿಸುರ್ಪು, ಮೈಯಲ್ಲಿ ಬೀಳುವುದು, ಮುಟ್ಟಿನ ಸಮಯದಲ್ಲಿ ಆಗುವ ಹೊಟ್ಟೆನೋವು ಇತ್ಯಾದಿಗಳಿಗೆ ನಾಟಿ ಔಷಧಿ ಕೊಡುತ್ತೇನೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುತ್ತಿದ್ದೇನೆ ಪದ್ಮಾವತಿ ಪರ್ಪುಂಜ, ನಾಟಿ ವೈದ್ಯೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.