Home_Page_Advt
Home_Page_Advt
Home_Page_Advt

ಹಾರಾಡಿ ಶಾಲಾ ಸಂಸತ್ ಚುನಾವಣೆ: ಶಾಲಾ ನಾಯಕಿ ಅಭಿಲಾಷ ದೋಟ, ಉಪನಾಯಕನಾಗಿ ನೀವ್ ಎರಿಕ್ ಆಯ್ಕೆ

Puttur_Advt_NewsUnder_1
Puttur_Advt_NewsUnder_1
ಅಭಿಲಾಷ ದೋಟ
ನೀವ್ ಎರಿಕ್

ಪ್ರಸಕ್ತ ಶೈಕ್ಷಣಿಕ ವರ್ಷದ ಹಾರಾಡಿ ಶಾಲಾ ಸಂಸತ್ತಿನ ಚುನಾವಣೆಯು ದಿನಾಂಕ ಜೂ.13 ಶಾಲೆಯಲ್ಲಿ ನಡೆದಿದ್ದು ಜಿದ್ದಾಜಿದ್ದಿನ ಕಣದಲ್ಲಿ ಶಾಲಾ ನಾಯಕಿಯಾಗಿ ಎಂಟನೇ ತರಗತಿಯ ಅಭಿಲಾಷ ದೋಟ ಆಯ್ಕೆಯಾಗಿದ್ದಾರೆ. ಶಾಲಾ ಉಪನಾಯಕನಾಗಿ ಏಳನೇ ತರಗತಿಯ ನೀವ್ ಏರಿಕ್ ಆಯ್ಕೆಯಾಗಿದ್ದಾರೆ.

ಶಾಲಾ ನಾಯಕ ಸ್ಥಾನಕ್ಕೆ ಒಟ್ಟು ಐದು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಅಭಿಲಾಷ ದೋಟ ಇವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪವಿತ್ ಯು ರೈ ಇವರಿಂದ ಎರಡು ಮತಗಳನ್ನು ಹೆಚ್ಚಿಗೆ ಪಡೆದು ವಿಜಯಿಯಾಗಿದ್ದಾರೆ. ಅಭ್ಯರ್ಥಿಗಳು ಪಡೆದ ಮತಗಳು ಈ ಕೆಳಕಂಡಂತಿವೆ. ಅಭಿಲಾಷ ದೋಟ – ೭೩, ಪವಿತ್ ಯು ರೈ – ೭೧, ಪವನ್ – ೪೭, ಭೂಮಿಕ – ೪೬ ಹಾಗೂ ದರ್ಶನ್ ರಾವ್ – ೦೩ ಮತಗಳನ್ನು ಪಡೆದರು. ಶಾಲಾ ಉಪನಾಯಕ ಸ್ಥಾನಕ್ಕೆ ಒಟ್ಟು ನಾಲ್ಕು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು, ನೀವ್ ಎರೀಕ್ ಇವರು ೯೨ ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಉಳಿದಂತೆ ಆರ್ಯಕಾಮತ್ – ೫೦, ಅಪೇಕ್ಷಾ – ೪೮, ಜಾಸ್ಮಿನ – ೪೫ ಮತಗಳನ್ನು ಪಡೆದರೆ ೦೫ ಮತಗಳು ಅಸಿಂಧುಗೊಂಡಿದ್ದವು.

ಶಾಲಾ ನಾಯಕಿಯಾಗಿ ಆಯ್ಕೆಯಾದ ಅಭಿಲಾಷ ದೋಟ ಇವರು ತೋಟಗಾರಿಕಾ ಇಲಾಖೆಯ ಉದ್ಯೋಗಿ ಲಕ್ಷಣ ದೋಟ ಹಾಗೂ ವಿವೇಕಾನಂದ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಸ್ಮಿತಾ ಇವರ ಪುತ್ರಿಯಾಗಿದ್ದಾರೆ. ಶಾಲಾ ಉಪನಾಯಕನಾಗಿ ಆಯ್ಕೆಗೊಂಡ ನೀವ್ ಎರೀಕ್ ಇವರು ಕುಡಿಪಾಡಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸ್ಟಾನಿ ಪ್ರವೀಣ್ ಹಾಗೂ ಮುಕ್ವೆ ಶಾಲಾ ಶಿಕ್ಷಕಿ ಹೆಲೆನ್ ಲೋಬೋ ಇವರ ಪುತ್ರರಾಗಿದ್ದಾರೆ.

ಶಾಲಾ ಸಂಸತ್ತಿನ ಸ್ಪೀಕರ್ ಆಗಿ ಪವಿತ್ ಯು ರೈ ಆಯ್ಕೆಯಾಗಿದ್ದಾರೆ. ಉಳಿದಂತೆ ಗೃಹ ಸಚಿವರಾಗಿ ಪವನ್ ಎಂ ಹಾಗೂ ಸಹಾಯಕ ಸಚಿವರಾಗಿ ಮಹೇಶ್ ಪ್ರಸಾದ್, ಆಕಾಶ್ ಶೆಟ್ಟಿ, ಭವಿತ್, ಚೇತನ್, ಭುವನೇಶ್, ಅನಿರುದ್ಧ ದೋಟ, ವಿಜಯ್, ಶ್ರೀಕಾಂತ್, ರಕ್ಷಿತ್, ಮನೋಜ್, ಯಶವಂತ್ ಇವರುಗಳು ಆಯ್ಕೆಯಾದರು. ಶಿಕ್ಷಣಖಾತೆಯ ಸಚಿವರಾಗಿ ವಳಲಮ್ಮ ಹಾಗೂ ಸಹಾಯಕ ಸಚಿವರಾಗಿ ಜಬೀನಾ, ಸನಾ, ಸಾನಿಯಾ, ನವ್ಯ, ಜೀವನ್, ನಿಶಾ, ರಿಫಾ, ಶಿಹಾನ, ಶೈಮಾ, ರುಕ್ಯಾ, ಆಶಾ ಇವರುಗಳು ಆಯ್ಕೆಯಾದರು. ಗೃಹಖಾತೆಯ ಸಚಿವರಾಗಿ ಪವನ್, ಸಹಾಯಕ ಸಚಿವರಾಗಿ ಮಹೇಶ್ ಪ್ರಸಾದ್, ಆಕಾಶ್, ಭವಿತ್, ಚೇತನ್, ಭುವನೇಶ್, ಅನಿರುದ್ಧ, ವಿಜಯ್, ಶ್ರೀಕಾಂತ್, ರಕ್ಷಿತ್, ಮನೋಜ್, ಯಶವಂತ್ ಇವರುಗಳು ಆಯ್ಕೆಯಾದರು. ವಾರ್ತಾಖಾತೆಯ ಸಚಿವರಾಗಿ ಸೌಮ್ಯ ಸಹಾಯಕ ಸಚಿವರಾಗಿ ಸಾನ್ವಿಕ, ಸಾನಿಕ ಆಯ್ಕೆಯಾದರು. ಸಾಂಸ್ಕೃತಿಕ ಖಾತೆಯ ಸಚಿವರಾಗಿ ಲೋಕೇಶ್ವರಿ ಸಹಾಯಕ ಸಚಿವರಾಗಿ ನಾಗಲಕ್ಷ್ಮಿ, ಶ್ರಾವ್ಯ, ಸಿಂಚನಾ, ಅಶ್ವಿನಿ ಇವರುಗಳು ಆಯ್ಕೆಯಾದರು. ಗ್ರಂಥಾಲಯ ಸಚಿವರಾಗಿ ವೀಕ್ಷಿತಾ ಸಹಾಯಕ ಸಚಿವರಾಗಿ ಚೈತನ್ಯ ಹಾಗೂ ಯಶಸ್ವಿ ಆಯ್ಕೆಯಾದರು. ಆರೋಗ್ಯ ಸಚಿವರಾಗಿ ಖುಷಿ ಸಹಾಯಕ ಸಚಿವರಾಗಿ ಅಸ್ಮಿನಾ, ವಂದನಾ, ಐಫಾ, ಹರ್ಷಿಣಿ, ಹೇಮಂತ್, ರಿತೇಶ್, ಸುಜಿತ್ ಇವರುಗಳು ಆಯ್ಕೆಯಾದರು. ನೀರಾವರಿ ಖಾತೆಯ ಸಚಿವರಾಗಿ ನಿಮಿತ್ ಸಹಾಯಕ ಸಚಿವರಾಗಿ ಧನುಷ್, ಗೌರೀಶ್, ಕಾರ್ತಿಕ್ ಹೆಗ್ಡೆ ಇವರುಗಳು ಆಯ್ಕೆಯಾದರು. ಕೃಷಿ ಸಚಿವರಾಗಿ ಚಮನ್ ಸಹಾಯಕ ಸಚಿವರಾಗಿ ಅರ್ಫಾಜ್, ಭರತ್, ದಿಗಂತ್, ಸಿಂಚನ್, ನಿಮಿತ್, ನಿಧಿ, ವಲ್ಲೀಶಕೃಷ್ಣ, ಗುಲ್ಶನ್‌ಬಾನು, ನಶೀರಾ, ಸವಿತಾ ಇವರುಗಳು ಆಯ್ಕೆಯಾದರು. ಕ್ರೀಡಾಖಾತೆ ಸಚಿವರಾಗಿ ಪ್ರಶಾಂತ್ ಸಹಾಯಕ ಸಚಿವರಾಗಿ ನರಸಿಂಹ, ಈರೇಶ, ಶೌಶಾನ, ದೇವಿಪ್ರಸಾದ್, ಮಿಯಾದ್, ಶಿನಾನ್, ಸ್ನೇಹಲತಾ, ಧನ್ಯಶ್ರೀ ಇವರುಗಳು ಆಯ್ಕೆಯಾದರು. ಆಹಾರಖಾತೆ ಸಚಿವರಾಗಿ ಸ್ವಾತಿ ಸಹಾಯಕ ಸಚಿವರಾಗಿ ಪವಿತ್ರ, ರೇಖಾ, ಹಂಸಿಕಾ, ಕವನ, ಧನಲಕ್ಷ್ಮಿ, ಕಾವ್ಯಾ ಇವರುಗಳು ಆಯ್ಕೆಯಾದರು. ವಿರೋಧ ಪಕ್ಷದ ನಾಯಕಿಯಾಗಿ ಭೂಮಿಕಾ ಸದಸ್ಯರುಗಳಾಗಿ ಆರ್ಯ ಕಾಮತ್, ಅಪೇಕ್ಷಾ, ಜಾಸ್ಮಿನಾ, ಧರ್ಶನ್, ಸುದರ್ಶನ್, ಆಫಿಯಾ, ಖುಷಿ, ಸೌಮ್ಯ, ಹರ್ಷಿತಾ, ಚಿಂತನ್, ರಾಕೇಶ್, ಹಫೀಝ್, ಹರ್ಷಿತ್ ಇವರುಗಳು ಆಯ್ಕೆಯಾದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.